ಜಿಲ್ಲೆ

16ರಿಂದ ಹಿರಿಯ ನಾಗರಿಕರ ರಾಷ್ಟ್ರ ಮಟ್ಟದ ಸಮ್ಮೇಳನ

ಮೈಸೂರು: ಅಖಿಲ ಭಾರತ ಹಿರಿಯ ನಾಗರಿಕರ ಸಂಘದಿಂದ ಅ.16 ಮತ್ತು 17ರಂದು ನಗರದಲ್ಲಿ ಹಿರಿಯ ನಾಗರಿಕರ ರಾಷ್ಟ್ರ ಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ.
ಕಲಾಮಂದಿರದಲ್ಲಿ ಆಯೋಜಿಸುವ ಸಮ್ಮೇಳನಕ್ಕೆ ಅ.16ರಂದು ಬೆಳಗ್ಗೆ 9ಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಎರಡು ದಿನಗಳು ಬೆಳಗ್ಗೆ ಮತ್ತು ಮಧ್ಯಾಹ್ನ ಹಿರಿಯ ನಾಗರಿಕರಿಗೆ ಸರ್ಕಾರದಿಂದ ದೊರಕುವ ಸವಲತ್ತು ಬಗ್ಗೆ ಅರಿವು ಮೂಡಿಸುವ ಸಭೆ ಮತ್ತು ಸಂಜೆ ಮನರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಿ.ರವೀಂದ್ರನಾಥ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎರಡು ದಿನಗಳ ಈ ಸಮ್ಮೇಳನದಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಲಾಗುವುದು. ಈ ಹಿಂದೆ ರೈಲ್ವೆ ಪ್ರಯಾಣದ ಟಿಕೆಟ್ ದರದಲ್ಲಿ ನೀಡಿದ್ದ ರಿಯಾಯಿತಿಯನ್ನು ಯಥಾವತ್ ಮುಂದುವರಿಸಬೇಕು, ರಾಜ್ಯ ಸಾರಿಗೆಯಲ್ಲಿ ಶೇ.50 ಪ್ರಯಾಣ ದರದಲ್ಲಿ ರಿಯಾಯಿತಿ ಹೆಚ್ಚಿಸಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಬಿ.ಆರ್.ಉಮಾಕಾಂತ್, ಎಚ್.ಎಸ್.ಲಕ್ಷ್ಮೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಜಯರಾಮು, ಖಜಾಂಚಿ ಆರ್.ನಾಗೇಶ್, ಡಿ. ರವೀಂದ್ರ, ಆರ್. ನಾಗೇಶ್, ಚಿಕ್ಕರಂಗಸ್ವಾಮಿ, ಚಿದಂಬರ್, ಜಯರಾಂ, ಮರಿಯಾದಾಸ್ ಇದ್ದರು.