ಜಿಲ್ಲೆ

16ರಂದು ಕೋಟೆನಾಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಚಿತ್ರದುರ್ಗ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬುಧವಾರ ಬೆಂಗಳೂರಲ್ಲಿ ಅಧಿಕಾರ ಸ್ವೀಕರಿಸಿದ ಪ್ರಥಮದಲ್ಲಿ ಬಿ.ವೈ.ವಿಜಯೇಂದ್ರ ಅವರು, ನ.16ರಂದು ಚಿತ್ರ ದುರ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಮಧ್ಯ ಕರ್ನಾಟಕದ ಐತಿಹಾಸಿಕ ಜಿಲ್ಲೆ, ಕೋಟೆನಾಡು, ಮಠ-ಮಾನ್ಯಗಳು ಬೀಡಿನಿಂದ ತಮ್ಮ ಜಿಲ್ಲಾ ಪ್ರವಾಸವನ್ನು ಆರಂಭಿಸಲು ಅವರು ಉದ್ದೇಶಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪ್ರವಾಸದ ವೇಳೆ ಜಿಲ್ಲೆ ನಾನಾ ಮಠಗಳಿಗೆ ಭೇಟಿ ನೀಡಿ ಮಠಾಧೀಶರ ಆರ್ಶೀವಾದ ಪಡೆಯಲಿದ್ದಾರೆ. ಬೆಳಗ್ಗೆ 8. 30ಕ್ಕೆ ಬೆಂಗಳೂರಿಂದ ಹೊರಟು ಬೆಳಗ್ಗೆ 11ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸುವ ಅವರು, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ನಿವಾ ಸಕ್ಕೆ ಭೇಟಿ ನೀಡಲಿದ್ದಾರೆ.
11.30ಕ್ಕೆ ಮುರುಘಾರಾಜೇಂದ್ರ ಮಠ, 11.45ಕ್ಕೆ ಶ್ರೀ ಕೃಷ್ಣ ಯಾದವಾನಂದ ಮಹಾಸಂಸ್ಥಾನ ಮಠ, 11.30ಕ್ಕೆ ಶ್ರೀ ಜಗದ್ಗುರು ಶ್ರೀ ಮಾದಾರ ಚನ್ನಯ್ಯ ಮಠ, 12.30ಕ್ಕೆ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸಂಸ್ಥಾನ ಭೋವಿಗುರುಪೀಠ. ಮಧ್ಯಾಹ್ನ ಒಂದು ಗಂಟೆಗೆ ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠ, 3.30ಕ್ಕೆ ಹೊಸದುರ್ಗ ಶ್ರೀ ಚಿನ್ಮೂಲಾದ್ರಿ ಭಗೀರಥ ಗುರುಪೀಠ, 4ಗಂಟೆಗೆ ಸಾಣೇಹಳ್ಳಿ ತರಳಬಾಳು ಶಾಖಾ ಮಠ, 4.30ಕ್ಕೆ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ,5.15ಕ್ಕೆ ಕೆಲ್ಲೋಡು ಶ್ರೀ ಕನಕ ಗುರುಪೀಠದ ಶಾಖಾ ಮಠಕ್ಕೆ ವಿಜಯೇಂದ್ರ ಭೇಟಿ ನೀಡಲಿದ್ದಾರೆ. 5.45ಕ್ಕೆ ಹೊಸದುರ್ಗ ಮಾರ್ಗ ಬೆಂಗಳೂರಿಗೆ ತೆರಳಲಿದ್ದಾರೆ.