ಕಲಬುರಗಿ: ಮಹಾಪುರುಷರರು ತಮ್ಮ ಅವದಿಯಲ್ಲಿ ಜನರಿಗಾಗಿ ಏನು ಜನ ಸೇವೆಯನ್ನು ಮಾಡಿದ್ದಾರೆ ಎಂಬುದನ್ನು ಹೊಸ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕಿದೆ ಎಂದು ಬಂಜಾರಾ ಸರ್ಕಾರಿ ಮತ್ತು ಅರೆ ಸರ್ಕಾರಿ ನಿವೃತ್ತಿ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ ಬಿ ನಾಯಕ ಹೇಳಿದರು.
ಬಂಜಾರಾ ಭವನದಲ್ಲಿ ಶ್ರೀ ಬಾಬಾ ಲಕ್ಕಿಷಾ ಬಂಜಾರಾ ಅವರ ೪೪೫ನೇ ಜಯಂತ್ಯೋತ್ಸವ ಹಾಗೂ ಡಿ ದೇವರಾಜ ಅರಸ ಅವರ ೧೦೮ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಲಕ್ಕಿಷಾ ಬಜಾರಾ ಅವರು ಸಮಾಜಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅವರು ಮಾಹಾನ್ ಪುರುಷರಾಗಿದ್ದರು. ವಾಸ ಮಾಡಿದಲ್ಲಿಯೇ ಗಂಗೆಯನ್ನು ಕರೆತರುತ್ತಿದ್ದರು. ಅಲ್ಲದೆ ಸಾಕಷ್ಟು ಯಾತ್ರಿ ನಿವಾಸಗಳನ್ನು ಕಟ್ಟಿದ್ದಾರೆ ಎಂದರು
ದೇವರಾಜ ಅರಸು ರಾಜ್ಯ ಕಂಡ ಶ್ರೇಷ್ಠ ಮುಖ್ಯಮಂತ್ರಿ. ಹಲವು ಉತ್ತಮ ಯೋಜನೆಗಳನ್ನು ಜಾರಿಗೆ ತಂದರು. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರೂ ಮಹಡಿಯ ಮನೆಯಲ್ಲಿಯೇ ಇದ್ದರು. ಅಂತ್ಯಸಂಸ್ಕಾರಕ್ಕೆ ಸಹ ಹಣ ಇರಲಿಲ್ಲ. ಇವರ ಪ್ರಾಮಾಣಿಕತೆ ಎಲ್ಲರಿಗೂ ಮಾದರಿಯಾಗಿದೆ ಎಂದು ನುಡಿದರು.
ಹಿರಿಯ ಮತ್ತು ಸಮಾಜ ಸೇವಕ ನರಸಿಂಗ ಚವ್ಹಾಣ್ ತರಿ ತಾಂಡಾ, ನೋರಾ ಆಸ್ಪತ್ರೆ ವೈದ್ಯ ಡಾ.ಆಜ್ರಾ, ಬರೋಕಾ ಕಣ್ಣಿನ ಆಸ್ಪತ್ರೆ ಆಡಳಿತ ಅಧಿಕಾರಿಗಳಾದ ಬಾಬು ದಡೇದ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಪ್ರಮುಖರಾದ ಪಿ.ಜಿ.ರಾಠೋಡ್, ವಿಠ್ಠಲ್ ಚವ್ಹಾಣ್, ರಾಮಚಂದ್ರ ಜಾಧವ್, ವಿಠ್ಠಲ್ ಜಾಧವ್, ಹೀರಾಮಣಿ ರಾಠೋಡ್, ಲಾಲ್ಲಪ್ಪ ರಾಠೋಡ್, ಎಸ್ಎಸ್ ಪವಾರ್, ಶಿವರಾಮ ರಾಠೋಡ್, ಧನಸಿಂಗ್ ರಾಠೋಡ್, ರಮೇಶ್ ಚವ್ಹಾಣ್ ಇತರರಿದ್ದರು.