ಕಲಬುರಗಿ; ಕಮಲಾಪುರ ತಾಲೂಕಿನ ಕುದಮುಡ ತಾಂಡಾದ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಭಾನುವಾರ ಸಂಭ್ರಮದಿಂದ ನೆರವೇರಿತು.
ಬಸವಕಲ್ಯಾಣ ತಾಲೂಕಿನ ಹಾರಕೂಡ ಮಠದ ಪೀಠಾಧಿಪತಿ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಪುರಾಣ, ಪ್ರವಚನ ಆಲಿಕೆಯಿಂದ ನೆಮ್ಮದಿ ಲಭಿಸುತ್ತದೆ. ದೇವಸ್ಥಾನಗಳಲ್ಲಿ ಕಾಲ ಕಳೆಯುವುದರಿಂದ ದೈವ ಶಕ್ತಿ ಲಭಿಸುತ್ತದೆ ಎಂದರು.
ಪ್ರಮುಖರಾದ ಶರಣಗೌಡ ಪಾಟೀಲ್ ಎ.ಇ., ಸಿದ್ರಾಮಪ್ಪಾ ದೆಗುರೆ, ಮಲ್ಲಯ್ಯ ಸ್ವಾಮಿ, ಶಿವಕುಮಾರ ಪಾಟೀಲ್, ಅಪ್ಪಣ್ಣ ಜನವಾಡ ಇತರರಿದ್ದರು.