ಜಿಲ್ಲೆ

ಮಹನೀಯರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ತ್ಯಾಗವೀರ ಶಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನು ಶಿಕ್ಷಣ ಸಂಸ್ಥೆಗಳಿಗಾಗಿ ಮುಡುಪಾಗಿಟ್ಟಿದ್ದರು. ಅಂಥ ಮಹನೀಯರ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಸಾಹಿತಿ ಡಾ. ರುದ್ರಣ್ಣ ಬಸಪ್ಪ ಚಿಲಮಿ ಹೇಳಿದರು.

ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಹಾಗೂ ಕೆಎಲ್‌ಇ ಸೊಸೈಟಿಯ ಅಂಗಸ0ಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್‌ಗಳಿಂದ ದೂರವಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಸಾಹಿತಿ ಡಾ. ಎಸ್.ಆರ್. ಗುಂಜಾಳ ಮಾತನಾಡಿ, ಲಿಂಗಾರಾಜರ ಕಾಲದಲ್ಲಿ 520 ಸಂಸ್ಥಾನಗಳು ಇದ್ದವು. ಆದರೆ, ಶಿಕ್ಷಣಕ್ಕಾಗಿ ಸಮಸ್ತ ಆಸ್ತಿಯನ್ನು ಮೀಸಲಿಟ್ಟಿದ್ದು ಲಿಂಗರಾಜರ ಸಂಸ್ಥಾನ ಮಾತ್ರ ಎಂದರು.

ಡಾ. ಎಸ್.ಎಸ್. ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿಗಳಾದ ಸಿ.ಬಿ. ಮಟ್ಟಿ ಪರಿಚಯಿಸಿದರು. ಎಸ್.ಎಸ್. ಜಂಬಗಿ ಪ್ರಾರ್ಥಿಸಿದರು. ಆರ್‌ಎಲ್‌ಎಸ್ ಹೈಸ್ಕೂಲ್ ಪ್ರಾಚಾರ್ಯ ಸಿ.ವಿ. ಕಣಬರ್ಗಿ ವಂದಿಸಿದರು. ಗೀತಾ ಹಿರೇಮಠ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮೊದಲು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಟೌನ್‌ಹಾಲ್‌ನಿಂದ ಗಾಂಽ ಚೌಕ್‌ನ ಕೆಸಿಸಿ ಬ್ಯಾಂಕ್ ವೃತ್ತದವರೆಗೆ ಲಿಂಗರಾಜರ ಭಾವಚಿತ್ರವನ್ನಿಟ್ಟು ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು.