ಚಿತ್ರದುರ್ಗ: ನನೆಗುದಿಗೆ ಬಿದ್ದಿರುವ ನಗರ ಸಹಿತ ಜಿಲ್ಲೆಯ 3 ಮೇಲ್ಸೇತುವೆಗಳ ನಿರ್ಮಾಣಕ್ಕೆ ಶೇ.100 ಅನುದಾನ ಬಿಡುಗಡೆಗೆ ರೈಲ್ವೆ ಸಚಿವರು ಒ ಪ್ಪಿಗೆ ನೀಡಿದ್ದಾರೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಚಿತ್ರದುರ್ಗ- ದಾವಣಗೆರೆ ರಸ್ತೆ ಚಿತ್ರದುರ್ಗ ರೈಲು ನಿಲ್ದಾಣ ಸಮೀಪದ ಎಲ್‌ಸಿ 22ಕ್ಕೆ 79 ಕೋಟಿ ರೂ.,ಚಿಕ್ಕಜಾಜೂರು ಬಳಿ ಎಲ್‌ಸಿ 1ಕ್ಕೆ 52 ಕೋಟಿ ರೂ.ಹಾಗೂ ಚಿಕ್ಕಜಾಜೂರು-ಚಿತ್ರದುರ್ಗ ನಡುವಿನ ಎಲ್‌ಸಿ 15ಕ್ಕೆ 34 ಕೋ ಟಿ ರೂ.ಸೇರಿ 164 ಕೋಟಿ ರೂ.ಅನುದಾನ ಭರಿಸಲು ರೈಲ್ವೆ ಸಚಿವರಾದ ಅಶ್ವಿನಿವೈಷ್ಣವ್ ಹಾಗೂ ವಿ.ಸೋಮಣ್ಣ ಒಪ್ಪಿದ್ದಾರೆಂದರು.
ಮೂರು ಮೇಲ್ಸೇತುವೆಗಳಿಗೆ ರಾಜ್ಯಸರ್ಕಾರ ಭೂಮಿ ಸ್ವಾಧೀನ ಪಡಿಸಿಕೊಂಡು,ಒಟ್ಟು ವೆಚ್ಚದ ಶೇ.50 ಹಾಗೂ ಕೇಂದ್ರ ಶೇ.50ನ್ನು ಭ ರಿಸಬೇಕೆಂದು ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಒಪ್ಪಂದವಾಗಿತ್ತು. ಆದರೆ,ಇವತ್ತಿನ ರಾಜ್ಯಸರ್ಕಾರದ ಪರಿಸ್ಥಿತಿಯಲ್ಲಿ ಒಂದು ರೂ. ಸಿಗು ವಂತಿಲ್ಲ,ಇದು ನಮಗೆ ಶಿಕ್ಷೆಯಾಗಿದೆ. ಆದ್ದರಿಂದ ಸಂಪೂರ್ಣ ವೆಚ್ಚ ಭರಿಸಬೇಕೆಂಬ ಮನವಿಗೆ ಸಚಿವರು ಸ್ಪಂದಿಸಿದ್ದಾರೆಂದರು.
ಚಿತ್ರದುರ್ಗ-ದಾವಣಗೆರೆ ರಸ್ತೆ ಎಲ್‌ಸಿ 22ಕ್ಕೆ 4 ಪಥದ ಮೇಲು ಸೇತುವೆ,ಎರಡೂ ಬದಿ 3 ಅಡಿ ಫುಟ್‌ಪಾತ್,ಸೇತುವೆ ಕೆಳಗೆ 5.5 ಮೀಟರ್ ಅಗಲದ ಸರ್ವಿಸ್‌ರೋಡ್ ನಿರ್ಮಿಸಲು 2 ಎಕರೆ ಭೂಮಿ ಅಗತ್ಯವಿದೆ.
ಶೀಘ್ರ ಭೂಸ್ವಾಧೀನ ಪಡಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್,ಶಾಸಕ ಕೆ.ಸಿ. ವೀರೇಂದ್ರಪಪ್ಪಿರನ್ನು ಕೋರುತ್ತೇನೆ. ಇಲ್ಲಿ ಪ್ರಭಾವಿಗಳ ಆಸ್ತಿ ಇದೆ ಎಂಬುದರ ಬಗ್ಗೆ ಗೊತ್ತಿಲ್ಲ,ಶೀಘ್ರ ಭೂಮಿ ಒದಗಿಸಿದರೆ ಅದರ ವೆಚ್ಚವನ್ನೂ ರೈಲ್ವೇ ಇಲಾಖೆ ಭರಿಸಲಿದೆ. ದಾ ವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗಕ್ಕೆ ಕೇಂದ್ರ ಈ ಬಜೆಟ್‌ನಲ್ಲಿ 549 ಕೋಟಿ ರೂ.ಮಂಜೂರು ಮಾಡಿದೆ. 12 ಕೋಟಿ ರೂ.ವೆಚ್ಚದಲ್ಲಿ ಚಿತ್ರದುರ್ಗ ರೈಲ್ವೆ ಹೊಸ ನಿಲ್ದಾಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 3 ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂ ರ್ಣವಾಗುವವರೆಗೆ ಬದಲಿ ಮಾರ್ಗದ ವ್ಯವಸ್ಥೆ ಕೋರಿ ಜಿಲ್ಲಾಧಿಕಾರಿ ಹಾಗೂ ಜನರಲ್ ಅಲೈನ್ಮೆಂಟ್ ಡ್ರಾಯಿಂಗ್ ಅನುಮೋದನೆಗಾಗಿ ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಸಿಇ ಅವರಿಗೆ ಪತ್ರ ಬರೆದಿದ್ದೇನೆ. ಶೀಘ್ರದಲ್ಲೇ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುತ್ತದೆ ಎಂದರು.
ಭದ್ರಾ ಮೇಲ್ದಂಡೆಗೆ 5300 ಕೋಟಿ ರೂ.ಅನುದಾನ ಬಿಡುಗಡೆಗೆ ನಿರಂತರ ಪ್ರಯತ್ನಿಸಲಾಗುತ್ತಿದೆ. ಈ ಯೋಜನೆಗೆ 50 ಕೋಟಿ ರೂ.ಆರಂಭಿಕ ಅನುದಾನವನ್ನು ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಮಂಜೂರು ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದಾರೆ.
ಈ ಹಿಂದೆ ತಾವು ನೀರಾವರಿ ಸಚಿವರಾಗಿದ್ದಾಗ ಹಾಗೂ ಬಸವರಾಜ ಬೊಮ್ಮಾಯಿ ಅವರ ನಿರಂತರ ಒತ್ತಡದ ಪರಿಣಾಮ ಕೇಂದ್ರ ಈ ಅನುದಾನವನ್ನು ಘೋಷಿಸಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 2 ಬಜೆಟ್‌ಗಳಲ್ಲಿ 5200 ಕೋಟಿ ರೂ. ಬಿಡುಗಡೆ ಮಾಡಿ ದ್ದರು. ಇವತ್ತಿನವರೆಗೆ 9120 ಕೋಟಿ ರೂ. ಖರ್ಚಾಗಿದೆ. ರಾಜ್ಯಸರ್ಕಾರ ಅನುದಾನ ಕೊಟ್ಟಿದ್ದರೆ 23 ಸಾವಿರ ಕೋಟಿ ರೂ.ವೆಚ್ಚದ ಕಾಮಗಾರಿಗೆ ವೇಗ ಸಿಗುತ್ತಿತ್ತು ಎಂದು ರೈತರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದರು.
ಎಂಎಲ್‌ಸಿ ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ, ಮಾಧುರಿ ಗಿರೀಶ್, ಮಲ್ಲಿಕಾರ್ಜುನ್, ಲೋಕೇಶ್,ನಾಗರಾಜ್, ಕೆ.ಟಿ. ಕುಮಾರಸ್ವಾಮಿ, ಛಲವಾದಿ ತಿಪ್ಪೇಸ್ವಾಮಿ, ಬಸಮ್ಮ, ನಾಗರಾಜ್‌ಬೇದ್ರೆ, ಶಿವಪ್ರಕಾಶ್‌ದಗ್ಗೆ ಇದ್ದರು.