ಜಿಲ್ಲೆ

16 ಲಕ್ಷ ಟನ್ ಕಬ್ಬು ನುರಿಸುವ ಗುರಿ

ಹುಕ್ಕೇರಿ: ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಅಂದಾಜು 16 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ. ರೈತರು ಹಾಗೂ ಕಾರ್ಖಾನೆ ಸದಸ್ಯರು ತಾವು ಬೆಳೆದ ಕಬ್ಬನ್ನು

ಹಿರಾ ಶುಗರ್ಸ್‌ಗೆ ಕಳುಹಿಸಬೇಕೆಂದು ಚೇರ್ಮನ್, ಶಾಸಕ ನಿಖಿಲ ಕತ್ತಿ ಮನವಿ ಮಾಡಿದರು.

ತಾಲೂಕಿನ ಸಂಕೇಶ್ವರದಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 64ನೇ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಪ್ರದೀಪನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 63 ವರ್ಷಗಳ ಇತಿಹಾಸದಲ್ಲಿ ಕಾರ್ಖಾನೆ ಎಂದಿಗೂ ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಲ್ಲ. ಸಹಕಾರ ಮಹರ್ಷಿ ದಿ.ಅಪ್ಪಣ್ಣಗೌಡರು ಹಾಗೂ ಹಿರಿಯರು ಸೇರಿ ಕಟ್ಟಿರುವ ಕಾರ್ಖಾನೆ ಸದಾ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಶ್ರಮಿಸುತ್ತಿದೆ ಎಂದರು.

ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಹುನ್ನೂರ ವಿಠ್ಠಲ ರಾಯದೇವರ ಅರ್ಚಕ ಬಾಗಪ್ಪ ಪೂಜೇರಿ ದಂಪತಿಗಳನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ಶಿವನಾಯಿಕ ನಾಯಿಕ, ಶಿವಪುತ್ರ ಶಿರಕೋಳಿ, ಪ್ರಭುದೇವ ಪಾಟೀಲ, ಬಸವರಾಜ ಕಲ್ಲಟ್ಟಿ, ಸುರೇಶ ಬೆಲ್ಲದ, ಬಾಬಾಸಾಹೇಬ ಅರಬೋಳೆ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸುರೇಂದ್ರ ದೊಡ್ಡಲಿಂಗನವರ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ಚೇರಮನ್ ದುರದುಂಡಿ ಪಾಟೀಲ, ಮುಖಂಡರಾದ ಸತ್ಯಪ್ಪ ನಾಯಿಕ, ಉದಯ ದೇಸಾಯಿ, ಶ್ರೀಕಾಂತ ಹತನೂರೆ, ಅಮರ ನಲವಡೆ, ಸುನೀಲ ಪರ್ವತರಾವ, ರಾಚಯ್ಯ ಹಿರೇಮಠ, ಗುರು ಕುಲಕರ್ಣಿ, ಲಿಂಗರಾಜ ನಾಯಿಕ, ಬಸಗೌಡ ಮಗೆನ್ನವರ, ಕೆಂಪಣ್ಣ ದೇಸಾಯಿ, ಶಶಿಕಾಂತ ದೊಡ್ಡಲಿಂಗನವರ, ಸುಭಾಸ ಪಾಟೀಲ, ಶೀತಲ ಬ್ಯಾಳಿ, ಅಪ್ಪಾಸಾಹೇಬ ಸಾರಾಪುರೆ, ಬಸವಂತ ರೆಡ್ಡಿ, ಕಾರ್ಖಾನೆ ಎಂಡಿ ಎಸ್.ಆರ್.ಕರ್ಕಿನಾಯಿಕ, ಮಾಜಿ ಸಮನ್ವಯ ಅಧಿಕಾರಿ ಜಯಸಿಂಗ್ ಸನದಿ, ಅಧೀಕ್ಷಕ ಸುಭಾಸ ನಾಶಿಪುಡಿ ಇತರರಿದ್ದರು.