ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ 16 ಪ್ರವಾಸಿ ತಾಣ

ಹುಬ್ಬಳ್ಳಿ: ಕರ್ನಾಟಕ ಪ್ರವಾಸೋದ್ಯಮ ನೀತಿ 2020- 26ರಡಿ ಧಾರವಾಡ ಜಿಲ್ಲೆಯಲ್ಲಿ 16 ಸ್ಥಳಗಳನ್ನು ಪ್ರವಾಸಿ ತಾಣಗಳೆಂದು ಗುರುತಿಸಲಾಗಿದೆ. ಹು-ಧಾ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ ಸದನದಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಲಿಖಿತ ರೂಪದಲ್ಲಿ ನೀಡಿರುವ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡದ ವರೂರು, ನೃಪತುಂಗ ಬೆಟ್ಟ, ಸಾಧನಕೆರೆ, ಕೆಲಗೇರಿ, ನೇಚರ್ ಫಸ್-ಇಕೋ ವಿಲೇಜ್, ನುಗ್ಗಿಕೆರೆ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಶಾಲ್ಮಲಾ ನದಿ ಉಗಮ ಸ್ಥಾನ, ಉಣಕಲ್ ಕರೆ, ಸಂಜೀವಿನಿ ಉದ್ಯಾನ, ಕೆಂಪಕೆರೆ, ಭೈರಿದೇವರಕೊಪ್ಪದ ಭಗವದ್ಗೀತಾ ಜ್ಞಾನ ಲೋಕ, ನವಲಗುಂದ, ಕೋಳಿವಾಡ, ಯಮನೂರು ಹಾಗೂ ಕಲಘಟಗಿಯ ನೀರಸಾಗರ ಕೆರೆ ಪ್ರವಾಸಿ ತಾಣಗಳಾಗಿವೆ. ಉಣಕಲ್ ಕೆರೆಯನ್ನು ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಉತ್ತರ ನೀಡಿದ್ದಾರೆ.