ಹಾವೇರಿ: ನಗರದಲ್ಲಿರುವ ಕೆಎಸ್ಬಿಸಿಎಲ್ ಡಿಪೋದಲ್ಲಿ ಸೇವನೆಗೆ ಅನುಪಯುಕ್ತ ಹಾಗೂ ಮಾರಾಟವಾಗದೇ ಅವಧಿ ಮೀರಿ ಉಳಿದ 16 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್ಗಳು ಬಿಯರ್ ದಾಸ್ತಾನನ್ನು ಶನಿವಾರ ನಾಶಪಡಿಸಲಾಯಿತು.
ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ 1,187 ಬಾಕ್ಸ್ಗೂ ಹೆಚ್ಚು ಬಿಯರ್ ಬಾಟಲಿಗಳನ್ನು ನಾಶಪಡಿಸಲಾಯಿತು. ವೈಜ್ಞಾನಿಕವಾಗಿ 6ಅಡಿ ಆಳದ ಗುಂಡಿಯಲ್ಲಿ ಬಾಟಲಿಗಳಲ್ಲಿದ್ದ ಬಿಯರ್ನ್ನು ಸುರಿದು ಗುಂಡಿ ಮುಚ್ಚಲಾಯಿತು.
ಕಾರ್ಯಾಚರಣೆಯಲ್ಲಿ ಹಾವೇರಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಹೊನ್ನಪ್ಪ ಓಲೇಕಾರ, ಕೆಎಸ್ಬಿಸಿಎಲ್ ಡಿಪೋ ವ್ಯವಸ್ಥಾಪಕ ಚಂದ್ರಶೇಖರ ಬುಲ್ಬುಲೆ, ಸಿಬ್ಬಂದಿ ರಾಘವೇಂದ್ರ ಮಸಾಲಜಿ, ವಿರೂಪಾಕ್ಷಿ ದೊಡ್ಡಕುಂಬಾರ, ಕೆಎಸ್ಬಿಸಿಎಲ್ ಡಿಪೋ ಅಬಕಾರಿ ನಿರೀಕ್ಷಕ ಸುನೀಲ್ ಸುಡಗಾಡದವರ, ಶ್ರೀಮತಿ ಜಿ.ಬಿ. ಕೋಡಿ ಇತರರಿದ್ದರು.