ಹಾರೂಗೇರಿ: ಪಟ್ಟಣದ ಜನತಾ ಸಹಕಾರ ಬ್ಯಾಂಕ್ ೧೧೯.೪೪ ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ ೧೬ ಲಾಭಾಂಶ ನೀಡಿದ್ದೇವೆ ಎಂದು ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಜನತಾ ಸಹಕಾರ ಬ್ಯಾಂಕ್‌ನಲ್ಲಿ ಶನಿವಾರ ೪೮ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಸಾಲ ನೀಡಿದ್ದೇವೆ ಎಂದರು.
ಆಡಳಿತ ವ್ಯವಸ್ಥಾಪನಾ ಸಮಿತಿ ಸದಸ್ಯ ಸಿ.ಆರ್.ಗುಡಸಿ ಮಾತನಾಡಿ, ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟ ಗ್ರಾಹಕರು ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಹುಬ್ಬಳ್ಳಿ ಸಿದ್ಧಾರೂಢ ಮಠದ ಸೇವಾ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ ಮಾತನಾಡಿದರು. ಲಿಂ.ಬಿ.ಆರ್.ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಸಾಹಿತಿ ವಿ.ಎಸ್.ಮಾಳಿ ಹಾಗೂ ಸೇವಾ ನಿವೃತ್ತರಾದ ಬ್ಯಾಂಕ್ ಸಿಬ್ಬಂದಿ ಎಸ್.ಕೆ.ಕಂಬಾರ, ಬಿ.ಎಚ್.ಟಕ್ಕಳಕಿ ಅವರನ್ನು ಸನ್ಮಾನಿಸಲಾಯಿತು.