ಶಿಕಾರಿಪುರದ ಕನಕ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಶಾಂತ್ ಜೀನಳ್ಳಿ, ಲಕ್ಷ್ಮಮ್ಮ ನಾಗರಾಜ್, ಗಿಡ್ಡೇಶ್ ಚೋರಡಿ, ಮಂಜಪ್ಪ, ಸತೀಶ್ ಇತರರಿದ್ದರು.  
ಜಿಲ್ಲೆ

ಕನಕ ಸೊಸೈಟಿಗೆ 16.92 ಲಕ್ಷ ರೂ. ಲಾಭ

ಶಿಕಾರಿಪುರ: ಸಹಕಾರ ತತ್ವ ನಮಗೆ ಉಸಿರಿದ್ದಂತೆ. ಇಂದು ಸಹಕಾರ ಸಂಘಗಳು ಜನಸಾಮಾನ್ಯರ ಮತ್ತು ರೈತಸ್ನೇಹಿಯಾಗಿವೆ. ನಿಮ್ಮೆಲ್ಲರ ಸಹಕಾರ ಮಾರ್ಗದರ್ಶನದಿಂದ ಸೊಸೈಟಿ ಲಾಭದಲ್ಲಿದೆ ಎಂದು ಕನಕ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪ್ರಶಾಂತ್ ಜೀನಳ್ಳಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸೊಸೈಟಿಯು ಕಳೆದ ಸಾಲಿನಲ್ಲಿ 16.92 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. 6.40 ಕೋಟಿ ರೂ. ಸಾಲ ನೀಡಿದೆ. ಸೊಸೈಟಿಯಲ್ಲಿ 2,595 ಸದಸ್ಯರಿದ್ದಾರೆ. 7.33 ಕೋಟಿ ರೂ. ಠೇವಣಿ ಹಾಗೂ 1.12 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದೆ ಎಂದರು.
ಉಪಾಧ್ಯಕ್ಷೆ ಲಕ್ಷ್ಮಮ್ಮ ನಾಗರಾಜ್, ನಿರ್ದೇಶಕರಾದ ಗಿಡ್ಡೇಶ್ ಚೋರಡಿ, ಮಂಜಪ್ಪ, ಸತೀಶ್, ಶುಭಾ ಮಂಜಪ್ಪ, ಲಕ್ಕಪ್ಪ, ರಮೇಶಪ್ಪ,ನಗರದ ಅಶೋಕಪ್ಪ, ಕೊಟ್ರಪ್ಪ, ಎಚ್.ಎಸ್.ರಘು, ಮಹೇಶ್, ಪರಶುರಾಮ ಚೌಟಗಿ ಇತರರಿದ್ದರು.