ಸಂಕೇಶ್ವರ ಬೀರದೇವರ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಬೀರದೇವ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಜಾನನ ಕ್ವಳ್ಳಿ ಮಾತನಾಡಿದರು. ಡಾ.ಜಯಪ್ರಕಾಶ ಕರಜಗಿ, ಸಚಿನ ಹೆಗಡೆ, ಅರ್ಜುನ ಕರಜಗಿ, ಶಂಕರರಾವ್ ಹೆಗಡೆ ಇತರರು ಇದ್ದರು. 
ಜಿಲ್ಲೆ

15ರಂದು ರಾಯಣ್ಣನ ಕಂಚಿನ ಪ್ರತಿಮೆ ಲೋಕಾರ್ಪಣೆ

ಸಂಕೇಶ್ವರ: ಪಟ್ಟಣದ ಹಳೆ ಪಿ.ಬಿ. ರಸ್ತೆಯಲ್ಲಿಯರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆ.15ರಂದು ರಾಯಣ್ಣನ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ ಎಂದು ಬೀರೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಜಾನನ ಕ್ವಳ್ಳಿ ಹೇಳಿದರು.

ಇಲ್ಲಿನ ಬೀರದೇವರ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ, ಆ.14ರಂದು ಬೆಳಗ್ಗೆ 8 ಗಂಟೆಗೆ ಬೀರದೇವರ ದೇವಸ್ಥಾನದಿಂದ ಕುಂಭಮೇಳ, ವಿವಿಧ ಕಲಾ ತಂಡಗಳೊಂದಿಗೆ ಸಂಗೊಳ್ಳಿ ರಾಯಣ್ಣ ಜ್ಯೋತಿ ಮೆರವಣಿಗೆ. ಬೆಳಗ್ಗೆ 11ಕ್ಕೆ ಪ್ರತಿಮೆ ಅನಾವಣರಗೊಂಡ ಬಳಿಕ ರಾಣಿ ಚನ್ನಮ್ಮ ಮಾರ್ಕೆಟ್ ಯಾರ್ಡ್‌ನಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ಪುರಸಭೆ ಸದಸ್ಯ ಡಾ.ಜಯಪ್ರಕಾಶ ಕರಜಗಿ ಮಾತನಾಡಿ, ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಸಂಕೇಶ್ವರ ಶಂಕರಾಚಾರ್ಯ ಸಂಸ್ಥಾನಮಠದ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ, ಅಥಣಿ ಕೌಲಗುಡ್ಡ ಸಿದ್ಧಶ್ರೀ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸುವರು. ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ನಿಖಿಲ್ ಕತ್ತಿ ರಾಯಣ್ಣ ಪ್ರತಿಮೆ ಉದ್ಘಾಟಿಸಲಿದ್ದಾರೆ. ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ ಅಧ್ಯಕ್ಷತೆ, ಮುಖ್ಯ ಅತಿಥಿಯಾಗಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಸಂಗಮ ಶುಗರ್ಸ್‌ ಅಧ್ಯಕ್ಷ ರಾಜೇಂದ್ರ ಪಾಟೀಲ, ಪುರಸಭೆ ಸದಸ್ಯರಾದ ಅಮರ ನಲವಡೆ, ಸುನೀಲ ಪರ್ವತರಾವ್, ಮಾಜಿ ಪುರಸಭೆ ಅಧ್ಯಕ್ಷ ಶ್ರೀಕಾಂತ ಹತನೂರಿ, ಕೆಇಬಿ ನಿರ್ದೇಶಕ ಕುಣಾಲ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಮುಡಶಿ, ಕನ್ನಡಪರ ಸಂಘಟನೆ ಮುಖಂಡರಾದ ಪ್ರಮೋದ ಹೊಸಮನಿ, ಮಹೇಶ ಹಟ್ಟಿಹೊಳಿ, ದಿಲೀಪ ಹೊಸಮನಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಯುವ ಮುಖಂಡರಾದ ಸಚಿನ ಹೆಗಡೆ, ಅರ್ಜುನ ಕರಜಗಿ, ಬೀರದೇವ ಟ್ರಸ್ಟ್ ಕಮಿಟಿ ನಿರ್ದೇಶಕರಾದ ಶಂಕರರಾವ್ ಹೆಗಡೆ, ಡಾ. ಜಯಪ್ರಕಾಶ ಕರಜಗಿ, ಭೀಮರಾವ್ ಮಲ್ಹಾರಿಗೋಳ, ಬೀರಪ್ಪ ಮುಸಾಯಿ, ಶಂಕರ ಕೇರಿಮನಿ, ಕರೆಪ್ಪ ಕರಿಗಾರ, ಗಣಪತಿ ಹೆಗಡೆ, ಸಿದ್ರಾಮ ಕೇರಿಮನಿ, ಭರಮಾ ಪೂಜೇರಿ, ಸಿದಗೌಡ ಹೆಗಡೆ, ಕಾರ್ಯದರ್ಶಿ ಅಜಿತ್ ಬಡಾಯಿ, ಸಹಕಾರ್ಯದರ್ಶಿ ಬೀರಸಿದ್ದ ಮುಸಾಯಿ ಇತರರು ಇದ್ದರು.