ಅಥಣಿ ಪಟ್ಟಣದಲ್ಲಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಕರಪತ್ರಗಳನ್ನು ಪುರಸಭಾ ಸದಸ್ಯ ರಾವಸಾಬ ಐಹೊಳೆ ಬಿಡುಗಡೆಗೊಳಿಸಿದರು. ಅಣ್ಣಾಸಾಬ ತೆಲಸಂಗ, ಅರುಣ ಯಲಗುದ್ರಿ, ಪ್ರದೀಪ ಜಾಧವ, ಸಿದ್ದು ಹಂಡಗಿ ಇತರರು ಇದ್ದರು. 
ಜಿಲ್ಲೆ

15ರಂದು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ

ಅಥಣಿ, ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಥಣಿ ಪುರಸಭಾ ಸದಸ್ಯ ರಾವಸಾಬ ಐಹೊಳೆ ಹೇಳಿದರು.

ಅಥಣಿ ಪಟ್ಟಣದಲ್ಲಿ ಈಚೆಗೆ ಚಿತ್ರಕಲಾ ಸ್ಪರ್ಧೆಯ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತಾಲೂಕಾಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ, ಕನ್ನಡ ನಾಡು-ನುಡಿ, ನೆಲ ಜಲ, ಐತಿಹಾಸಿಕ, ಸಾಹಿತ್ಯ, ಕಲೆ ಸಂಸ್ಕೃತಿ ಬಿಂಬಿಸುವ ಯಾವುದೇ ಚಿತ್ರವನ್ನು ಬಿಡಿಸಬಹುದು ಎಂದರು.

ನ.15 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿರುವ ಡಾ. ಆರ್. ಎಚ್. ಕುಲಕರ್ಣಿ ಸಭಾಂಗಣದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಜತೆಗೆ ಪ್ರಮಾಣ ಪತ್ರ ಮತ್ತು ಸಮಾಧಾನಕರ ಬಹುಮಾನ ನೀಡಲಾಗುವುದು.

ಸಮಾಜ ಸೇವಕ ಅರುಣ ಯಲಗುದ್ರಿ, ಪ್ರದೀಪ ಜಾಧವ, ಸಿದ್ದು ಹಂಡಗಿ, ಜಗನ್ನಾಥ ಬಾಮನೆ, ವಿಜಯಕುಮಾರ ಅಡಹಳ್ಳಿ, ವೆಂಕಟೇಶ ದೇಶಪಾಂಡೆ, ಸಿ. ಎ ಇಟ್ನಾಳಮಠ, ರಾಜು ವಾಘಮೊರೆ, ದೀಪಕ ಶಿಂಧೆ, ಶಂಕರ ಮಗದುಮ್ಮ, ಸುಭಾಷ ಕಾಂಬಳೆ, ರಾಕೇಶ ಮೈಗೂರ, ರಮೇಶ ಬಾಗವಾಡಗಿ, ಪರಶುರಾಮ ನಂದೇಶ್ವರ ಇದ್ದರು.