ಜಿಲ್ಲೆ

15ರಂದು ಮಾಸ್ಟರ್ಸ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ

ಹಾಸನ: ನಗರದ ಮಾಸ್ಟರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ಡಿಸೆಂಬರ್ 15ರ ಭಾನುವಾರ ಬೆಳಗ್ಗೆ 10 ಗಂಟೆಗೆ 2024-25ನೇ ಸಾಲಿನ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು, ಆಕಾಂಕ್ಷಿತರಿಗಾಗಿ ಮಾಸ್ಟರ್ಸ್ ಟ್ಯಾಲೆಂಟ್ ಸರ್ಚ್ ಪರೀಕ್ಷೆಯನ್ನು ಏರ್ಪಡಿಸಲಾಗಿದೆ.

ಮಾಸ್ಟರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಕೆಸಿಇಟಿ, ಎನ್‌ಇಇಟಿ ಮತ್ತು ಜೆಇಇ ಕೋಚಿಂಗ್ ಸೌಲಭ್ಯವಿದ್ದು, 2012-13 ರಿಂದ ಇಂದಿಗೂ ಜಿಲ್ಲೆಯ ಫಲಿತಾಂಶದಲ್ಲಿ (ಬೋರ್ಡ್ ಎಕ್ಸಾಂ, ಕೆಸಿಇಟಿ, ಎನ್‌ಇಇಟಿ ಮತ್ತು ಜೆಇಇ) ಪ್ರಥಮ ಸ್ಥಾನದಲ್ಲಿದೆ.

ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 60 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪರೀಕ್ಷೆ ನಡೆಯುವ ಸ್ಥಳ ಮಾಸ್ಟರ್ಸ್ ಪದವಿ ಪೂರ್ವ ಕಾಲೇಜು, ವಿವೇಕ ನಗರ ಹಾಸನ. ಹೆಚ್ಚಿನ ಮಾಹಿತಿಗಾಗಿ 08172297164, 9663145506 ಸಂಪರ್ಕಿಸಬಹುದಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಶಾಲಾ ಐಡಿ ಕಾರ್ಡ್‌ಅನ್ನು ಕಡ್ಡಾಯವಾಗಿ ತರುವುದು.