ಚಿತ್ರದುರ್ಗ: ತಾಲೂಕಿನ ಚಿಕ್ಕಪ್ಪನಹಳ್ಳಿಯ ಶ್ರೀ ಗುರು ಕೊಟ್ರಸ್ವಾಮಿ ರಥೋತ್ಸವ ಏ.15ರಂದು ಬೆಳಗ್ಗೆ 10 ಕ್ಕೆ ವಿಜೃಂಭಣೆಯಿಂದ ನೆರವೇರಲಿದೆ. ಮಧ್ಯಾಹ್ನ 2 ಕ್ಕೆ ಓಕಳಿ, 3 ಕ್ಕೆ ಗಂಗಾಪೂಜೆ ಬಳಿಕ ದೇವರನ್ನು ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನಕ್ಕೆ ಕರೆದೊಯ್ಯಲಾಗುವುದು. ರಥೋತ್ಸವದ ಮುನ್ನಾ ದಿನ ಏ.14ರಂದು ಬೆಳಗ್ಗೆ 10ಕ್ಕೆ ರುದ್ರಾಭಿಷೇಕ, ಇಷ್ಟಲಿಂಗ ಮಹಾಪೂಜೆ, ಸಂಜೆ 4ಕ್ಕೆ ಕೋಣಂದೂರು ಮತ್ತು ಪುರ ಮಠದ ಪೀಠಾಧ್ಯಕ್ಷ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಚನ, 7 ಗಂಟೆಗೆ ಗುರು ಕೊಟ್ರಸ್ವಾಮಿ ಗಣಾರಾಧನೆ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಜರುಗಲಿದೆ.
(ಸಿಟಿಡಿ 12 ಚಿಕ್ಕಪ್ಪನಹಳ್ಳಿ ಕೊಟ್ರಸ್ವಾಮಿ ದೇವಾಲಯ)ಚಿಕ್ಕಪ್ಪನಹಳ್ಳಿ ಕೊಟ್ರಸ್ವಾಮಿ ದೇವಾಲಯ.