DEVENDRAMMA 
ಜಿಲ್ಲೆ

ಮಾ.೦೭ ರಂದು ೧೫ ನೇ ವಾರ್ಷಿಕೋತ್ಸವ

Raichur - Reporter - Rachhai Swamy

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಣಜಲಿ ಗ್ರಾಮದಲ್ಲಿ ಮಾ.೭ ರಂದು ಶ್ರೀ ಜಗಜ್ಯೋತಿ ಬಸವೇಶ್ವರ ಅರಿವಿನ ಮನೆಯ ೧೫ ನೇ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಾಗತಿಕ ಲಿಂಗಾಯತ ಸಮಾಜ ಗೌರವಾಧ್ಯಕ್ಷೆ ದೇವೆಂದ್ರಮ್ಮ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವ ಕೇಂದ್ರದ ಜಿಲ್ಲಾಧ್ಯಕ್ಷರಾಗಿದ್ದ ದಿ.ವೀರಭದ್ರಪ್ಪ ಕುರುಕುಂದಿ ಇವರ ನೆನಪು ಕಾರ್ಯಕ್ರಮ ಸಹ ನಡೆಯಲಿದೆ. ಸಾನಿಧ್ಯವನ್ನು ಇಲಕಲ್ ಚಿತ್ತರಗಿಯ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಶ್ರೀಗಳು ವಹಿಸಲಿದ್ದಾರೆ.

ಶಿರೂರು ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮಿ ಮತ್ತು ಪಾಂಡೋಮಟ್ಟಿಯ ಶ್ರೀಗುರುಬಸವ ದೇವರು ಅನುಭವ ನೀಡಲಿದ್ದಾರೆ. ನೇತೃತ್ವವನ್ನು ಜಾಗೀರ ಜಾಡಲಿದಿನ್ನಿ ನೀಲಾಂಬಿಕ ಬಸವಯೋಗಾಶ್ರಮದ ಶ್ರೀ ವೀರಭದ್ರಯ್ಯ ಸ್ವಾಮಿ, ಶಾಸಕಿ ಕರಿಯಮ್ಮ ನಾಯಕ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ರವಿ ಪಾಟೀಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಕಾಕರಗಲ್ ವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ಬ್ಯಾಗವಾಟ, ಮೇಘರಾಜ, ಬಸವರಾಜ ಮಾಲಿಪಾಟೀಲ್ ಇದ್ದರು.

---------------