ವಿಜಯಪುರದ ಬಿಎಲ್​ಡಿಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕ್ಯಾಂಪಸ್​ ಸಂದರ್ಶನದಲ್ಲಿ 156 ಜನರು ಅಪ್ರೆಂಟಿಸ್​ ತರಬೇತಿಗೆ ಆಯ್ಕೆಯಾದರು. ಮನೋಜಕುಮಾರ, ಸುಮಂತ, ಎಂ.ಡಿ. ಪಡಸಲಗಿ ಮತ್ತಿತರರಿದ್ದಾರೆ. 
ಜಿಲ್ಲೆ

156 ಜನ ಅಪ್ರೆಂಟಿಸ್ ತರಬೇತಿಗೆ ಆಯ್ಕೆ

ಗಿರೀಶ ಸಗರ

ವಿಜಯಪುರ : ನಗರದ ಬಿಎಲ್​ಡಿಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಯಾಂಪಸ್​ ಸಂದರ್ಶನದಲ್ಲಿ 156 ಜನರು ಅಪ್ರೆಂಟಿಸ್​ ತರಬೇತಿಗೆ ಆಯ್ಕೆಯಾದರು.

ಬೆಂಗಳೂರಿನ ಕಿಲೋರ್ಸ್ಕರ್​ ಟೊಯೊಟಾ ಟೆಕ್ಸಟೈಲ್ಸ್​ ಮಷಿನರಿ ಪೆ.ಲಿ. (ಕೆಟಿಟಿಎಂ) ಕಂಪನಿಯವರು ಕ್ಯಾಂಪಸ್​ ಸಂದರ್ಶನ ನಡೆಸಿದರು. ಜಿಲ್ಲೆಯ ವಿವಿಧ ಐಟಿಐ ಕಾಲೇಜುಗಳಿಂದ ಸುಮಾರು 172 ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಕೆಟಿಟಿಎಂ ಕಂಪನಿಯ ಎಚ್​ಆರ್​ ವಿಭಾಗದ ಮುಖ್ಯಸ್ಥ ಮನೋಜಕುಮಾರ ಮತ್ತು ಸುಮಂತ ಅಭ್ಯರ್ಥಿಗಳಿಗೆ ಲಿಖಿತ ಪರೀೆ ಹಾಗೂ ಮೌಖಿಕ ಸಂದರ್ಶನ ನಡೆಸುವ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.

ಬಿಎಲ್​ಡಿಇ ಐಟಿಐ ಕಾಲೇಜಿನಿಂದ 60 ಜನ ತರಬೇತಿದಾರರು ಕಂಪೆನಿಯ ಅಪ್ರೆಂಟಿಸ್​ ತರಬೇಕಿಗೆ ಆಯ್ಕೆಗೊಂಡರು. ಒಂದು ವರ್ಷದ ಈ ಅವಧಿಯಲ್ಲಿ ಅಭ್ಯರ್ಥಿಗಳು ತರಬೇತಿಯ ಜತೆಗೆ 18,000 ಸಾವಿರರಿಂದ 22,000 ಸಾವಿರ ರೂಗಳವರೆಗೆ ಸ್ಟೆಫಂಡ್​ ಪಡೆಯಲಿದ್ದಾರೆ. ಅಲ್ಲದೆ, ಅಪ್ರೆಂಟಿಸ್​ ಬಳಿಕ ಅದೇ ಕಂಪನಿಯಲ್ಲಿ ಮುಂದುವರೆಯುವ ನಿರೀೆ ಇದೆ.

ಅಪ್ರೆಂಟಿಸ್​ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯ ಅಧ್ಯ ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಸಂತಸ ವ್ಯಕ್ತಪಡಿಸಿ ಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಎಂ.ಡಿ. ಪಡಸಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.