ಮುದ್ದೇಬಿಹಾಳ ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ನ್ಯಾಯಾ-ಧೀಶರಾದ ಸಂಪತ್​ಕುಮಾರ ಬಳೂಲಗಿಡ ಅಧ್ಯತೆಯಲ್ಲಿ ನಡೆದ ಲೋಕ ಅದಾಲತ್​ನಲ್ಲಿ ಕದಾರರು, ವಕೀಲರು ಭಾಗವಹಿಸಿದ್ದರು. 
ಜಿಲ್ಲೆ

1544 ಪ್ರಕರಣಗಳು ರಾಜಿ ಸಂಧಾನದಲ್ಲಿ ಇತ್ಯರ್ಥ

ಗಿರೀಶ ಸಗರ

ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ರಾಷ್ಟ್ರೀಯ ಲೋಕ ಅದಾಲತ್​ ಏರ್ಪಡಿಸಲಾಗಿತ್ತು.

ಹಿರಿಯ ಮತ್ತು ಜೆಎಂಎ್​ಸಿ ಎರಡೂ ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 6,380 ಬಾಕಿ ಪ್ರಕರಣಗಳಲ್ಲಿ 2,388 ಪ್ರಕರಣಗಳನ್ನು ಕೈಗೆತ್ತಿಕೊಂಡು 1544 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.

ಅಪರಾಧ, ಎಂವಿಸಿ, ಚೆಕ್​ಬೌನ್ಸ್​, ಮೆಂಟೇನೆನ್ಸ್​, ಪಾಲು ವಾಟ್ನಿ, ಎಲ್​ಎಸಿ ಇಪಿ, ಎಂವಿಸಿ ಇಪಿ, ಅಪರಾಧ ದಂಡ, ಅಬಕಾರಿ ಇಲಾಖೆ ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.

ಪೂರ್ವದಾವೆ (ಪಿಎಲ್​ಸಿ ಕೇಸ್​) ಪ್ರಕರಣಗಳಲ್ಲಿ ಕಂದಾಯ ಇಲಾಖೆಯ ಕಂದಾಯ ಅದಾಲತ್​ ಪ್ರಕರಣಗಳು, ಅಬಕಾರಿ ಇಲಾಖೆಯ ಅಬಕಾರಿ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು ಸೇರಿ ಒಟ್ಟು 1942 ಪ್ರಕರಣಗಳಲ್ಲಿ 749 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ಸಮಿತಿ ಅಧ್ಯ& ಹಿರಿಯ ಶ್ರೇಣಿ ಸಿವಿಲ್​ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಸಮಿತಿ ಸದಸ್ಯ ಕಾರ್ಯದರ್ಶಿ& ಜೆಎಂಎ್​ಸಿ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಅವರು ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.

ನ್ಯಾಯಾಂಗ ಸಂಧಾನಕಾರರಾಗಿ ವಕೀಲರಾದ ಎಚ್​.ಜಿ.ನಾಗೋಡ, ಯಮನಪ್ಪ ಕೆ., ಸರ್ಕಾರಿ ವಕೀಲರಾದ ಬಸವರಾಜ ಆಹೇರಿ, ನ್ಯಾಯವಾದಿಗಳ ಸಂದ ಅಧ್ಯ ಶಶಿಕಾಂತ ಮಾಲಗತ್ತಿ, ಸಮಿತಿ ಆಡಳಿತ ಸಹಾಯಕ ಅರವಿಂದ ಕುಂಬಾರ, ಎ್​ಡಿಸಿ ಮಂಜುಳಾ ಗಡಾದ, ಆರ್​.ಎಸ್​.ಕಮ್ಮಾರ, ನರ್ಮದಾ ರೋಳ, ಗೀತಾ ರಾಂಪುರ, ಬಿ.ಎಸ್​.ಹುಣಶ್ಯಾಳ, ಎನ್​.ಬಿ.ಮದಿಹಳ್ಳಿ, ಇಸಾಕ್​ ಒಂಟಿ ಸಹಕರಿಸಿದರು.

ಕೋರ್ಟ್​ ಶಿರಸ್ತೇದಾರ ಎಸ್​.ಎಸ್​.ಚಕ್ರಮನಿ, ಸುರೇಶ ಬಳಗಾನೂರ, ಮಹಾಂತೇಶ ಹಚರಡ್ಡಿ, ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ವಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಎಸ್​.ಆರ್​.ಸಜ್ಜನ, ಎನ್​.ಜಿ.ಕುಲಕರ್ಣಿ, ಎನ್​.ಆರ್​.ಮೊಕಾಶಿ, ಎಂ.ಆರ್​.ಪಾಟೀಲ, ಬಿ.ಎಂ.ಮುಂದಿನಮನಿ, ಐ.ಎಸ್​.ಹಗಟಗಿ, ಎಂ.ಎ.ಲಿಂಗಸೂರ, ಚೇತನ್​ ಶಿವಸಿಂಪಿ, ಎಲ್​.ಆರ್​.ನಾಲತವಾಡ, ಎನ್​.ಬಿ.ಮುದ್ನಾಳ, ಪಿ.ಬಿ.ಗೌಡರ, ಎಸ್​.ಎಂ.ಚಿಲ್ಲಾಳಶೆಟ್ಟರ, ಐ.ಎಸ್​.ಹಗಟಗಿ, ನ್ಯಾಯವಾದಿಗಳ ಸಂದ ಸದಸ್ಯರು ಪಾಲ್ಗೊಂಡಿದ್ದರು.