ಕಾರವಾರ: ಜೂನ್ 18 ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯಲಿರುವ ಎಲ್ಲ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಹ್ಯಾಂಡ್ ಸ್ಯಾನಿಟೈಸರನ್ನು ಮಾಜಿ ಶಾಸಕ ಸತೀಶ ಸೈಲ್ ನೀಡಿದ್ದಾರೆ.
ಕಾರವಾರ ಡಿಡಿಪಿಐ ಕಚೇರಿಗೆ ಅವರು ಸಾಮಗ್ರಿಗಳನ್ನು ಹಸ್ತಾಂತರಿಸಿದರು.
ಪರೀಕ್ಷೆಗೆ ಸುಮಾರು 10 ಸಾವಿರ ವಿದ್ಯಾರ್ಥಿಗಳು ಹಾಜರಾಗಲಿದ್ದು, ಒಟ್ಟು 30 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಂದು ಕೇಂದ್ರಕ್ಕೆ 5 ಲೀಟರ್ನಂತೆ ಒಟ್ಟು 150 ಲೀಟರ್ ಸ್ಯಾನಿಟೈಸರ್ನ್ನು ಹಸ್ತಾಂತರಿಸಿದರು.
ಗಿರಿಜಾಬಾಯಿ ಸೈಲ್ ಇಂಜಿನಿಯರಿಂಗ್ ಕಾಲೇಜ್ ನಿರ್ದೇಶಕಿ ಸಾದ್ವಿ ಸೈಲ್, ಪ್ರಕೃತಿ ರೆಸಿಡೆನ್ಸಿಯ ಡಾ.ಪೃಥ್ವಿ ಶೆಟ್ಟಿ, ಮಾಜಿ ಶಾಸಕ ಸತೀಶ ಸೈಲ್, ನಗರಸಭೆ ಸದಸ್ಯ ಮೋಹನ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಪ್ರಭಾಕರ ಮಾಳ್ಸೇಕರ್ ಇದ್ದರು.</