ಜಿಲ್ಲೆ

15 ಲಕ್ಷ ರೂ. ಜಪ್ತಿ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಹುಬ್ಬಳ್ಳಿಗೆ ಕಾರ್​ನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 15 ಲಕ್ಷ ರೂ.ಗಳನ್ನು ಹು-ಧಾ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಗರದ ಕಾರವಾರ್ ರೋಡ್ ಚೆಕ್​ಪೋಸ್ಟ್ ಬಳಿ ಭಾನುವಾರ ಜಪ್ತಿ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಕುಮಟಾದ ಶ್ಯಾಮಜಿ ಪಟೇಲ ಹಾಗೂ ಸುನೀಲ ಪಟೇಲ ಬಂಧಿತರು. ಪೊಲೀಸರು ತಪಾಸಣೆ ಮಾಡುವ ವೇಳೆ ಕಾರಿನಲ್ಲಿ ಹಣ ಸಾಗಿಸುತ್ತಿರುವುದು ತಿಳಿದು ಬಂದಿದೆ. ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.