ಜಿಲ್ಲೆ

15 ಡಬ್ಬಿ ಅಂಗಡಿಗಳ ತೆರವು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕಿಮ್್ಸ ಹಿಂಬದಿ ರಸ್ತೆಯ ಎರಡೂ ಬದಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ 15 ಡಬ್ಬಿ ಅಂಗಡಿಗಳನ್ನು ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.

ಕಿಮ್್ಸ ಆಸ್ಪತ್ರೆಗೆ ಬರುವ ಅಂಬುಲೆನ್ಸ್, ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದರಿಂದ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ಕುರಿತು ಹಲವು ಬಾರಿ ಮೌಖಿಕವಾಗಿ ಹೇಳಿದ್ದರೂ ಅಂಗಡಿಕಾರರು ಸ್ವಯಂ ಆಗಿ ತೆರವುಗೊಳಿಸಿರಲಿಲ್ಲ. ಪಾಲಿಕೆ ವಲಯ ಕಚೇರಿ ನಂ. 5ರ ಸಹಾಯಕ ಆಯುಕ್ತ ಗಿರೀಶ ತಳವಾರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ನೆರವಿನೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಹಿರಿಯ ಆರೋಗ್ಯ ನಿರೀಕ್ಷಕ ರಾಜು ಕೋಲಗೊಂಡ, ಕಿರಿಯ ಆರೋಗ್ಯ ನಿರೀಕ್ಷಕ ಫಜಲ್ ಬಗಲಿ, ಪೌರಕಾರ್ವಿುಕರು ಇದ್ದರು.