ಜಿಲ್ಲೆ

ಅಪಘಾತ 15 ಮಂದಿಗೆ ಗಾಯ

ಬಿಡದಿ: ಹೆದ್ದಾರಿಯ ಡಿವೈಡರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸ್ ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯ ಅವರಗೆರೆ ಬ್ರಿಡ್ಜ್ ಬಳಿ ಗುರುವಾರ ಮುಂಜಾನೆ ನಡೆದಿದೆ.
ಸಾರಿಗೆ ಬಸ್ಸು ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಸಾರಿಗೆ ಇಲಾಖೆಯ ಅಂಬಾರಿ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ ಕೇರಳದ ಕ್ಯಾಲಿಕಟ್‌ನಿಂದ ಅಂಬಾರಿ ಬಸ್ಸು ಬೆಂಗಳೂರಿಗೆ ಪ್ರಯಾಣ ಬೆಳೆಸಿತ್ತು.
ಬಸ್ ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮವಾಗಿ ಎಡಬದಿಯ ಡಿವೈಡರ್‌ಗೆ ಡಿಕ್ಕಿ‌ ಹೊಡೆದಿದೆ ತಕ್ಷಣವೇ ಚಾಲಕ ಬಸ್ ಕಂಟ್ರೋಲ್‌ಗೆ ತಂದು ಮುಂದೆ ಹಾಗಬಹುದಾದ ಅವಘಡವನ್ನ ತಪ್ಪಿಸಿದ್ದಾನೆ. ಅದೃಷ್ಟವಶಾತ್ ಡಿವೈಡರ್‌ಗೆ ಬಸ್ಸು ಡಿಕ್ಕಿ ಹೊಡೆದಾಗ ಎದುರುನಿಂದ ಯಾವುದೇ ವಾಹನಗಳು ಬಂದಿಲ್ಲ.
ಅಪಘಾತದಲ್ಲಿ ಬಸ್ ಚಾಲಕ, ನಿರ್ವಾಹಕ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಸಣ್ಣ, ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.