ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿಯಲ್ಲಿ ಸದ್ಯ ಟೊಮ್ಯಾಟೊ ವಹಿವಾಟು ಜೋರಾಗಿದ್ದು, 15 ಕೆಜಿ ತೂಕದ ಟೊಮ್ಯಾಟೊ ಬಾಕ್ಸ್ ಶನಿವಾರ 850 ರೂಪಾಯಿವರೆಗೆ ಮಾರಾಟವಾಗಿವೆ.
ತಾಲೂಕಿನಲ್ಲಿ ಸುಮಾರು 26 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಮಾವು ಬೆಳೆಯಲಾಗಿದ್ದು, ಮಳೆ ಅಭಾವ, ಹವಾಮಾನ ವೈಪರೀತ್ಯದಿಂದ ಮಾವು ಸಲು ಕೈಕೊಟ್ಟಿದ್ದು, ಆದರೆ ಒಂದೆರಡೆಡು ತಿಂಗಳಿಂದ ಟೊಮ್ಯಾಟೊ ಉತ್ತಮ ಬೆಲೆಗೆ ಮಾರಾಟವಾಗುತ್ತಿರುವುದು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ. ತಾಲೂಕಿನ 700 ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದ್ದರೂ ಬಹುತೇಕ ಬೆಳೆ ನುಶಿ ರೋಗಕ್ಕೆ
ತುತ್ತಾಗಿದೆ. ಇದರಿಂದ ಇಳುವರಿ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ದುಬಾರಿಯಾಗುತ್ತಿದೆ ಎನ್ನಲಾಗುತ್ತಿದೆ.