ಕಾಸರಗೋಡು: ಕರ್ನಾಟಕದಲ್ಲಿ ಶೇ.15ರಷ್ಟು ಪ್ರಯಾಣ ದರ ಏರಿಕೆಯಾಗಿದ್ದು, ಕೇರಳ ಮತ್ತು ಕರ್ನಾಟಕ ನಡುವಿನ ಒಪ್ಪಂದದ ಪ್ರಕಾರ ಕೇರಳ ಆರ್‌ಟಿಸಿ ದರವೂ ಕಾಸರಗೋಡಿನ ಅಂತಾರಾಜ್ಯ ಬಸ್‌ಗಳಲ್ಲಿ ಹೆಚ್ಚಾಗಿರುವುದರಿಂದ ಗಡಿನಾಡಿನ ಜನತೆಗೆ ಹೆಚ್ಚಿನ ಹೊರೆಯಾಗಿದೆ. ಸಿಎಂ ಸಿದ್ಧರಾಮಯ್ಯ ಈ ಜನವಿರೋಧಿ ನೀತಿ ಕೈಬಿಡುವಂತೆ ಮಹಿಳಾ ಮೋರ್ಚಾ ನೇತಾರೆ ಅಶ್ವಿನಿ ಎಂ.ಎಲ್. ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಕೆಎಸ್ಸಾರ್ಟಿಸಿಯಲ್ಲಿ ಉಚಿತ ಬಸ್ ಪ್ರಯಾಣ ಒದಗಿಸಿರುವುದರಿಂದಲೇ ಸಾರಿಗೆ ನಿಗಮದ ವೆಚ್ಚದಲ್ಲಿ ಭಾರಿ ಏರಿಕೆಯುಂಟಾಗಿದೆ. ಈ ಹೆಚ್ಚುವರಿ ಹೊರೆ ಸಮತೋಲನಗೊಳಿಸಲು ಟಿಕೆಟ್ ದರ ಹೆಚ್ಚಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಉಚಿತ ಪ್ರಯಾಣದಿಂದ ಪ್ರಯೋಜನದ ಬದಲಾಗಿ ಆರ್ಥಿಕ ಒತ್ತಡ ಹೆಚ್ಚಲು ಕಾರಣವಾಗಿದೆ. ಸರ್ಕಾರದ ಈ ದರ ಏರಿಕೆ ಜನವಿರೋಧಿ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.