ಜಿಲ್ಲೆ

15 ದಿನದಿಂದ ಎಣ್ಣೆ ಹೊಡೆಯುವುದನ್ನು ಬಿಟ್ಟಿದ್ದ ವ್ಯಕ್ತಿ ಸಾವು

ರಾಣೆಬೆನ್ನೂರ: ಮದ್ಯ ಸೇವನೆ ಮಾಡುವುದನ್ನು ಬಿಟ್ಟ ವ್ಯಕ್ತಿ ಎದೆಯಲ್ಲಿ ಉರಿ ಉಂಟಾಗಿ ಮೃತಪಟ್ಟ ಘಟನೆ ತಾಲೂಕಿನ ನದಿಹರಳಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಭರಮಪ್ಪ ಹನುಮಂತಪ್ಪ ಹಂಚಿನಮನಿ (39) ಮೃತ ವ್ಯಕ್ತಿ.
ಈತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ. ಕಳೆದ 15 ದಿನದಿಂದ ಮದ್ಯ ಸೇವನೆಯನ್ನು ಬಿಡಿಸಲಾಗಿತ್ತು. ಇದರಿಂದಾಗಿ ಎದೆ ಉರಿ ಬರುತ್ತಿದೆ ಎಂದು ಮನೆಯಲ್ಲಿ ಹೊರಳಾಡುತ್ತಿದ್ದ ಸಮಯದಲ್ಲಿ ಕೂಡಲೇ ಆತನನ್ನು ಹರಿಹರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.