ಚಿಕ್ಕಮಗಳೂರು ಶಾರದಾ ಪೈ ಕಲ್ಯಾಣ ಮಂಟಪದಲ್ಲಿ ಭಾನುವಾರ ಚಿಕ್ಕಮಗಳೂರು ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಸಿ.ಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ಎಚ್.ನಾಗಭೂಷಣ್, ಬಿ.ಮಂಜಪ್ಪ, ಎಚ್.ಟಿ.ಮಂಜಪ್ಪ, ಆರ್.ಶ್ರೀನಿವಾಸ್, ಎಸ್.ಡಿ.ಮಂಜಪ್ಪ, ಎಂ.ಸುಧಾ ಮತ್ತಿತರರಿದ್ದರು. 
ಜಿಲ್ಲೆ

ಅಂಚೆ ಇಲಾಖೆ ನೌಕರರ ಸಹಕಾರ ಸಂಘಕ್ಕೆ ೧೫.೮೧ ಲಕ್ಷ ನಿವ್ವಳಲಾಭ

ಚಿಕ್ಕಮಗಳೂರು: ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘವು ಶೈಕ್ಷಣಿಕ ಸಾಲಿನಲ್ಲಿ ೧೫.೮೧ ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮೂಲಕ ಪ್ರತಿವರ್ಷವು ಲಾಭಾಂಶದಿAದ ಪ್ರಗತಿ ಹೊಂ ದುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಭಾಸ್ಕರ್ ತಿಳಿಸಿದರು.

ನಗರದ ಶಾರದಾ ಪೈ ಕಲ್ಯಾಣ ಮಂಟಪದಲ್ಲಿ ಭಾನುವಾರ ಚಿಕ್ಕಮಗಳೂರು ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರ ಸಹಕಾರ ಮತ್ತು ನಿರ್ದೇಶಕರ ಸಮಯೋಚಿತ ಕಾರ್ಯತತ್ಪರತೆಯಿಂದ ಸಂಘದ ಕಾರ್ಯಚಟುವಟಿಕೆಗಳು ಸಕ್ರಿಯವಾಗಿ ನಡೆದಿವೆ. ಇದರ ಪರಿಣಾಮ ಈ ಸಾಲಿನಲ್ಲಿ ಸಂಘವು ೧೫.೮೧ ಲಕ್ಷ ನಿವ್ವಳ ಲಾಭದಲ್ಲಿದೆ. ಈಗಾಗಲೇ ಸದಸ್ಯರುಗಳಿಗೆ ೨.೪೨ ಕೋಟಿ ಸಾಲಸೌಲಭ್ಯ ಒದಗಿಸಿ ೨.೩೨ ಕೋಟಿ ವಸೂಲಾ ತಿಯನ್ನು ಪೂರೈಸಲಾಗಿದೆ ಎಂದು ಹೇಳಿದರು.
ಸಂಘದಲ್ಲಿ ೧,೩೨೪ ಷೇರುದಾರ ಪೈಕಿ ೯೩ ಲಕ್ಷ ರೂ. ಷೇರು ಹಣ ಸಂಗ್ರಹವಿದೆ. ಜೊತೆಗೆ ಒಟ್ಟು ೧.೩೬ ಕೋಟಿ ರೂ. ಠೇವಣಿಯಿದೆ. ಸಂಘದ ಸರ್ವತೋಮುಖ ಅಭಿವೃದ್ಧಿಯೇ ಆಡಳಿತ ಮಂಡಳಿಯ ಗುರಿಯಾಗಿರುತ್ತದೆ. ಇದಕ್ಕೆ ಸದಸ್ಯರುಗಳು ಹಾಗೂ ನಿರ್ದೇಶಕರ ಸಹಕಾರ ಬಹಳಷ್ಟು ಅಗತ್ಯವಿದೆ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರವನ್ನು ನಡೆಸಿ ಸಂಘದ ಅಭಿವೃದ್ಧಿಗೆ ಕಾರಣಕರ್ತರಾಗಬೇಕು. ಮುಂಬರುವ ದಿನಗಳಲ್ಲಿ ಸಂಘಕ್ಕೆ ಒಂದು ಸ್ವಂತ ಕಟ್ಟಡ ಹೊಂದುವ ಗುರಿಯಿದೆ. ಅದರಂತೆ ನಿವೇಶನ ಅಥವಾ ಕಟ್ಟಡವನ್ನು ಕೆಲವೇ ದಿನಗಳಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದರು.
ಇದೇ ವೇಳೆ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ೧೦ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಚ್.ನಾಗಭೂಷಣ್, ನಿರ್ದೇಶಕರಾದ ಬಿ.ಮಂಜಪ್ಪ , ಎಚ್.ಟಿ.ಮಂಜಪ್ಪ, ಎಸ್.ಡಿ.ಮಂಜಪ್ಪ, ಆರ್.ಶ್ರೀನಿವಾಸ್, ಎಚ್.ಎಲ್.ಪ್ರಸನ್ನಕುಮಾರ್, ಎಚ್.ಸುಬ್ರಹ್ಮ ಣ್ಯ, ಬಿ.ಎನ್.ಸಚಿನ್‌ಕುಮಾರ್, ಘನಲಿಂಗಮೂರ್ತಿ, ಸಿ.ಎಸ್.ಶಶಿಕುಮಾರ್, ಎಂ.ಸುಧಾ, ರೋವಿನಾ ಮೇರಿ ಅನಿತಾ, ಸೌರಭ್ ಆಸ್ಟಿಕರ್, ಟಿ.ಎಸ್.ಬಸವರಾಜ್, ಕಾರ್ಯದರ್ಶಿ ಮಧು ಮತ್ತಿತರರಿದ್ದರು.