ಜಿಲ್ಲೆ

ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 15.50ಲಕ್ಷ ರೂ. ವಶ

ಸೌಮ್ಯ ಆರ್

ಕಾಸರಗೋಡು: ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 15.50ಲಕ್ಷ ರೂ. ನಗದನ್ನು ವಿದ್ಯಾನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಉಳಿಯತ್ತಡ್ಕ ವರ್ಕತ್ತೋಡಿಯ ಅಪಾರ್ಟ್‌ಮೆಂಟ್‌ನ ಲತೀಫ್ ಅಲಿಯಾಸ್ ಅಬ್ದುಲ್ ಲತೀಫ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಳಿಯತ್ತಡ್ಕದ ಪೆಟ್ರೋಲ್ ಪಂಪ್ ಬಳಿ ವಿದ್ಯಾನಗರ ಠಾಣೆ ಎಸ್.ಐ ಉಮ್ಮರ್ ಟಿ.ಕೆ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯಿಂದ ಎರಡು ತಿಂಗಳ ಹಿಂದೆಯೂ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 13.16ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದರು.