ಜಿಲ್ಲೆ

1,438 ಸದಸ್ಯರಿಗೆ 15.84 ಕೋಟಿ ರೂ.ಬೆಳೆಸಾಲ ವಿತರಣೆ

ಘಟಪ್ರಭಾ: ಕಳೆದ 112 ವರ್ಷಗಳಿಂದ ಸಹಕಾರ ೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲ್ಲೋಳಿ ಪಿಕೆಪಿಎಸ್​ 2.69 ಕೋಟಿ ರೂ. ಷೇರು ಬಂಡವಾಳ, 5.90 ಕೋಟಿ ರೂ. ನಿಧಿ, ಬಿಡಿಸಿಸಿ ಬ್ಯಾಂಕ್​ನಲ್ಲಿ ಆರ್​ಎ್​ಡಿ ಸಹಿತ 7.34 ಕೋಟಿ ರೂ. ಗುಂತಾವಣೆ ಹೊಂದಿ 58.34 ಲ ರೂ.ಲಾಭ ಗಳಿಸಿದೆ. ಷೇರುದಾರರಿಗೆ ಶೇ.5ರಷ್ಟು ಲಾಭಾಂಶ ವಿತರಿಸಿದೆ ಎಂದು ಸಂ ಅಧ್ಯ ನೀಲಕಂಠ ಬಸಪ್ಪ ಕಪಲಗುದ್ದಿ ತಿಳಿಸಿದರು.

ಸಮೀಪದ ಕಲ್ಲೋಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 112ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, 1,438 ಸದಸ್ಯರಿಗೆ 15.84 ಕೋಟಿ ರೂ.ಬೆಳೆಸಾಲ, 5 ಸದಸ್ಯರಿಗೆ 27.16 ಲ ರೂ. ಟ್ರ್ಯಾಕ್ಟರ್​ ಸಾಲ ಹಾಗೂ 14 ಸದಸ್ಯರಿಗೆ 97 ಸಾವಿರ ಹೈನುಗಾರಿಕೆ ಸಾಲ ವಿತರಿಸಿದೆ. ಜತೆಗೆ ಸ್ವಂತ ಬಂಡವಾಳದಲ್ಲಿ 9.71 ಲ ರೂ. ಬೆಳೆೆಸಾಲ ನೀಡಲಾಗಿದೆ ಎಂದರು.

ಹೊಸ ಪತ್ತ ಮಂಜೂರಿ ಪಡೆದು ಪ್ರತಿ ಎಕರೆಗೆ 40 ಸಾವಿರ ರೂ.ಗಳಂತೆ 16.40 ಕೋಟಿ ರೂ.ಮಂಜೂರಾಗಿದ್ದು, ಅದರಲ್ಲಿ 16 ಕೋಟಿ ರೂ. ಡಿಸಿಸಿ ಬ್ಯಾಂಕ್​ನಿಂದ ಹಾಗೂ 28.83 ಲ ರೂ. ಸ್ವಂತ ಬಂಡವಾಳದಲ್ಲಿ ಸಾಲ ವಿತರಿಸಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಶ್ರಮದ ಲವಾಗಿ ಶೇ.100 ರಷ್ಟು ವಸೂಲಾತಿ ಸಾಧ್ಯವಾಗಿದೆ ಎಂದು ವಿವರಿಸಿದರು.

ಉಪಾಧ್ಯ ಭೀಮಪ್ಪ ವ್ಯಾಪಾರಿ, ನಿರ್ದೇಶಕರಾದ ಬಸವರಾಜ ಬೆಳಕೂಡ, ಮಲ್ಲಪ್ಪ ಕಡಾಡಿ, ಆನಂದ ಹೆಬ್ಬಾಳ, ಶಂಕರ ಗೋರೋಶಿ, ಬಸಪ್ಪ ಪಾಟೀಲ, ಧರೀಶ ಖಾನಗೌಡ್ರ, ಮಹಾದೇವಿ ಖಾನಾಪುರ, ಕೆಂಪವ್ವ ಗೋರೋಶಿ, ಮಲ್ಲಪ್ಪ ಪೂಜೇರಿ, ಧರ್ಮಣ್ಣ ನಂದಿ ಇತರರಿದ್ದರು. ಮಲ್ಲಪ್ಪ ಹೆಬ್ಬಾಳ ವಾರ್ಷಿಕ ವರದಿ ಮಂಡಿಸಿದರು, ಮಾನಿಂಗ ಮೇತ್ರಿ ವಂದಿಸಿದರು.