ಚಿತ್ರದುರ್ಗ: ನಗರದ ಎಂ.ಕೆ.ಪ್ಯಾಲೇಸ್ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶನದಂತೆ ಜಿಲ್ಲೆಯ ಒಟ್ಟು 142 ಹಜ್ ಯಾತ್ರಾರ್ಥಿಗಳಿಗೆ ಸುರಕ್ಷಾ ಲಸಿಕೆ ಹಾಕಲಾಯಿತು.
ನಂತರ ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಿಂದ ಹೊರಡುವ ಯಾತ್ರಾರ್ಥಿಗಳಿಗೆ ಸುರಕ್ಷಾ ಲಸಿಕೆ, ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಬಿಸಿಲಾಘಾತ ಘಟನೆಗಳು ಸಂಭವಿಸದಂತೆ, ದೇಹ ನಿರ್ಜಲೀಕರಣ ಆಗದಂತೆ, ಪದೇ ಪದೆ ನೀರು ಸೇವಿಸುವುದು, ನೆರಳಿನ ಆಶ್ರಯ, ದ್ರವರೂಪ ಆಹಾರ ಸೇವನೆ, ಮಜ್ಜಿಗೆ, ಎಳನೀರು, ನಿಂಬೆ ಹಣ್ಣಿನ ಪಾನಕ ಸೇವನೆ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಅತ್ಯುತ್ತಮ ಎಂದು ಸಲಹೆ ನೀಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಮೆನಂಜೋ ಕಾಕಲ್ ಮೆನಂಜೈಟೀಸ್ ರೋಗದ ವಿರುದ್ಧ, ಇನ್ಫ್ಲ್ಲೂಯಂಜಾ ಮತ್ತು ಓರಲ್ ಪೋಲಿಯೊ ಲಸಿಕೆ, ದೃಢೀಕರಣ ಪತ್ರ ಎಲ್ಲ ಯಾತ್ರಾರ್ಥಿಗಳಿಗೆ ನೀಡಲಾಗಿದೆ ಎಂದರು.
ಟಿಎಚ್‌ಒ ಡಾ.ಬಿ.ವಿ.ಗಿರೀಶ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್, ಗೋಪಾಲಕೃಷ್ಣ, ಡಾ.ರಾಹುಲ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಅರುಂಧತಿ, ಜಿಲ್ಲಾ ಲಸಿಕಾ ವ್ಯವಸ್ಥಾಪಕ ವೀರೇಶ್, ರಾಜ್ಯ ಹಜ್ ಸಮಿತಿಯ ಜಿ.ಕರೀಮುಲ್ಲಾ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಇತರರಿದ್ದರು.