ಹರಪನಹಳ್ಳಿಯ ಐ.ಬಿ.ವೃತ್ತದಲ್ಲಿ ವಿವಿಧ ಸಂಘಟನೆಯ ಮುಖಂಡರು ಸ್ವಾತಂತ್ರೃ ಪ್ರಜಾಪ್ರಭುತ್ವ ಸಂವಿಧಾನ ಉಳಿಸುವ ಪ್ರಚಾರ ಆಂದೋಲನ ಬಗ್ಗೆ ಬುಧವಾರ ಅರಿವು ಮೂಡಿಸಿದರು. ಸಿಐಟಿಯು ಮುಖಂಡ ಆರ್.ಎಸ್.ಬಸವರಾಜ, ಪ್ರಮುಖರಾದ ಟಿ.ರೇಣುಕಮ್ಮ, ಟಿ.ಪವಿತ್ರ, ಬಸವರಾಜ, ರಹಮತ್ ಇದ್ದರು. 
ಜಿಲ್ಲೆ

14 ರಂದು ಹೊಸಪೇಟೆಯಲ್ಲಿ ಆಹೋರಾತ್ರಿ ಧರಣಿ

Gangavati - Desk - Veeresh S Ullagaddi

ಹರಪನಹಳ್ಳಿ: ಕ್ವಿಟ್ ಇಂಡಿಯಾ ಚಳುವಳಿ ಭಾಗವಾಗಿ ಆ.14 ಸಂಜೆಯಿಂದ ಆ. 15 ಬೆಳಗಿನವರೆಗೆ ಹೊಸಪೇಟೆಯಲ್ಲಿ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್ ಎಸ್ ಬಸವರಾಜ್ ಹೇಳಿದರು.


ಪಟ್ಟಣದ ಪ್ರವಾಸಿ ಮಂದಿರದದಲ್ಲಿ ಆಯೋಜಿಸಿದ್ದ ವಿವಿಧ ಸಂಘಟನೆಗಳ ಜಾಗೃತಿ ಸಭೆಯಲ್ಲಿ ಬುಧವಾರ ಮಾತನಾಡಿದರು.

ಹೊಸಪೇಟೆ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಆಹೋರಾತ್ರಿ ಧರಣಿಯಲ್ಲಿ ಉದ್ಯೋಗ ಖಾತ್ರಿ, ಕುಡಿವ ನೀರು ಯೋಜನೆ ಸಮರ್ಪಕ ಜಾರಿ ಹಾಗೂ ಮನೆ ನಿವೇಶನದ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಲಾಗುವುದು ಎಂದರು.


ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ವಿ.ರೇಣುಕಮ್ಮ ಮಾತನಾಡಿ, ಆಹೋರಾತ್ರಿ ಧರಣಿಗೆ ಹರಪನಹಳ್ಳಿ ತಾಲೂಕಿನಿಂದ ಕಾರ್ಮಿಕರು, ದೇವದಾಸಿ ಮಹಿಳಾ ವಿಮೋಚನ ಸಂಘದ ಕಾರ್ಯಕರ್ತರು ಭಾಗವಹಿಸಬೇಕೆಂದು ಕರೆ ನೀಡಿದರು.


ಮುಖಂಡ ಎಚ್. ರಾಹಮತ್, ಕೆಪಿಆರ್‌ಎಸ್ ಬದ್ಯಾ ನಾಯ್ಕ, ಕರೀವಿರಾನಗೌಡ, ಸಿಐಟಿಯು ಸಂಚಾಲಕಿ ಟಿ.ಪವಿತ್ರ, ಡಿಎಚ್‌ಎಸ್ ಎ. ಭರಮಪ್ಪ, ಕಟ್ಟಡ ಕಾರ್ಮಿಕರ ಸಂಘದ ಸಬ್ಬೀರ್, ಎಸ್‌ಎಫ್‌ಐ ಸಂಘಟನೆಯ ತಾಲೂಕು ಕಾರ್ಯದರ್ಶಿ ವೆಂಕಟೇಶ್, ಲೋಕೇಶ್ ದೊಡ್ಡಮನಿ, ಬಸವರಾಜ್, ಸಂಜುನಾಯ್ಕ ಇದ್ದರು.