ಜಿಲ್ಲೆ

14 ರಂದು ಜೀವಮಾನ ಸಾಧನೆ, ಅಪ್ರತಿಮ ಸಾಧಕರಿಗೆ ಅಭಿನಂದನೆ

ಹಾಸನ: ಸೇವೆಯ ನಿಟ್ಟಿನಲ್ಲಿ ಅನ್ನ, ಅಕ್ಷರ ಮತ್ತು ಅವಕಾಶ ಕಲ್ಪಿಸುವ ಸಂಕಲ್ಪದೊಂದಿಗೆ ಪ್ರಾರಂಭವಾದ ಅಂತಾರಾಷ್ಟ್ರೀಯ ಒಕ್ಕಲಿಗ ಯುವ ಬ್ರಿಗೇಡ್ ಸಂಘಟನೆ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಮಾರ್ಗದರ್ಶನದಲ್ಲಿ ಸುಮಾರು 25ಕ್ಕೂ ಹೆಚ್ಚು ದೇಶಗಳಲ್ಲಿ ಸೇವಾ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ಅವರು ತಿಳಿಸಿದರು.

ನಗರದ ಎಂ.ಜಿ. ರಸ್ತೆಯ ಬಳಿ ಇರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಜೂ.14 ರಂದು, ಶನಿವಾರ ಸಂಜೆ 5.30ಕ್ಕೆ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡರಿಗೆ ಜೀವಮಾನ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಹೊಯ್ಸಳ ನಾಡಿನ ಸಾಧಕರಿಗೆ ಮತ್ತು ಯುಪಿಎಸ್‌ಸಿ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಏರ್ವಡಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ವಹಿಸುವರು.ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಅವರು ಕಾರ್ಯಕ್ರಮ ಉದ್ಘಾಟಿಸುವರು, ಶಾಶಕರಾದ ಶಿವಲಿಂಗೇಗೌಡ ಅವರು ಅಧ್ಯಕ್ಷತೆಯನ್ನು ವಹಿಸುವರು. ಆದಿಚುಂಚನಗಿರಿ ಹಾಸನ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ಶಂಭುನಾಥ ಸ್ವಾಮಿ ಉಪಸ್ಥಿತಿಯಿರುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಸದ ಶ್ರೇಯಶ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಮಹಾರಾಷ್ಟ್ರ ಸರ್ಕಾರದ ಹಿರಿಯ ಅಧಿಕಾರಿಗಳಾದ ಡಾ. ಕೆ.ಎಚ್. ಗೋವಿಂದರಾಜ್, ಪ್ರದೀಪ್ ಪ್ರಭಾಕರ್, ಪತ್ರಕರ್ತ ಹರಿಪ್ರಸಾದ್, ನಗರ ಪಾಲಿಕೆ ಮೇಯರ್ ಎಂ. ಚಂದ್ರೇಗೌಡ, ಹಿರಿಯ ಕೆಎಎಸ್ ಅಧಿಕಾರಿ ಜಗದೀಶ್, ಡಾ. ಎಂ.ಕೆ. ಶ್ರುತಿ, ರುದ್ರಪ್ಪ ಕೆ. ಗೌಡ, ಲೋಕೇಶ್ ಬಾಬು, ಉದ್ಯಮಿ ಕೆ.ಎಸ್. ವೆಂಕಟೇಶ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಐಎಎಸ್ ಅಧಿಕಾರಿ ಪಿ.ಎಸ್. ಗಿರೀಶ್, ಐಆರ್‌ಎಸ್ ಅಧಿಕಾರಿ ವರುಣ್ ರಂಗಸ್ವಾಮಿ, ಐಎಫ್‌ಎಸ್ ಅಧಿಕಾರಿ ಸಿ.ಕೆ. ಯೋಗೀಶ್, ಟಿಎಎಫ್‌ಎಸ್ ಅಧಿಕಾರಿ ರಶ್ಮಿ ರಮೇಶ್ ದೊಡ್ಡಮನೆ ಹಾಗೂ ಯುಪಿಎಸ್‌ಸಿ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರದೀಪ್, ಆನಂದ್, ಶ್ಯಾಮ್ ಗೌಡ, ದೊರೆಗೌಡ ಇತರರು ಉಪಸ್ಥಿತರಿದ್ದರು.