ಅರಕಲಗೂಡು: ತಾಲೂಕಿನ ಮೂಲೆಹೊಸಹಳ್ಳಿ ಬಳಿ ಬುಧವಾರ ಲಾರಿ ಹರಿದು 14 ಕುರಿಗಳು ಮೃತಪಟ್ಟಿದ್ದು, 4 ಕುರಿಗಳು ಗಾಯಗೊಂಡಿವೆ.
ಗ್ರಾಮದ ಅಣ್ಣೇಗೌಡ ಮತ್ತು ಚಂದ್ರೇಗೌಡ ಎಂಬುವವರಿಗೆ ಸೇರಿದ ಕುರಿಗಳು ಲಾರಿ ಚಕ್ರಕ್ಕೆ ಸಿಲುಕು ಮೃತಪಟ್ಟಿವೆ. ಕುರಿಗಳು ರಸ್ತೆ ಬದಿ ತೆರಳುತ್ತಿದ್ದಾಗ ಕೇರಳದಿಂದ ಮಾಗಡಿ-ಸೋಮವಾರಪೇಟೆ ಮಾರ್ಗದ ರಸ್ತೆಯಲ್ಲಿ ಬಸವಾಪಟ್ಟಣ ಕಡೆಗೆ ವೇಗವಾಗಿ ಬಂದ ಲಾರಿಗೆ ಕುರಿಗಳು ಸಿಲುಕಿವೆ. ಕೊಣನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.