ಮಡಿಕೇರಿ: ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೪.೬೪ ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩೦.೪೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೨.೭೩ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೧೦.೭೩ ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೨೨.೪, ನಾಪೋಕ್ಲು ೬.೨, ಸಂಪಾಜೆ ೭೭, ಭಾಗಮಂಡಲ ೧೬, ವಿರಾಜಪೇಟೆ ಕಸಬಾ ೨.೮೦, ಹುದಿಕೇರಿ ೩.೮೦, ಶ್ರೀಮಂಗಲ ೨.೬೦, ಪೊನ್ನಂಪೇಟೆ ೩.೨೦, ಅಮ್ಮತ್ತಿ ೨, ಬಾಳೆಲೆ ೨, ಸೋಮವಾರಪೇಟೆ ಕಸಬಾ ೧೩.೪, ಶನಿವಾರಸಂತೆ ೫.೬, ಶಾಂತಳ್ಳಿ ೨೭, ಕುಶಾಲನಗರ ೪.೪, ಸುಂಟಿಕೊಪ್ಪ ೧೪ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ೨೮೫೬.೫೧ ಅಡಿ ನೀರಿದೆ. ಇಂದಿನ ನೀರಿನ ಒಳಹರಿವು ೧೦,೦೯೫ ಕ್ಯೂಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೩೨೫೦ ಕ್ಯೂಸೆಕ್ ಇದೆ.