ಕೊಳ್ಳೇಗಾಲ: ಶ್ರೀಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಫೆ.13ರಂದು ವಿಜೃಂಭಣೆಯಿಂದ ನಡೆಯಲಿದ್ದು. ಈ ಹಿನ್ನೆಲೆಯಲ್ಲಿ ಫೆ.6ರಿಂದ 17ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಲಿವೆ.
ಫೆ.6ರಂದು ಬೆಳಗ್ಗೆ ಉತ್ಸವಾಂಗ ಪಂಚಾಮೃತ ಸ್ನಪನಾ ದಿಗಳು ರಾತ್ರಿ ಅಂಕುರಾರ್ಪಣಾ ಸೇನಾಪತಿ ಉತ್ಸವ ಧ್ವಜ ಸಮರ್ಪಣೆ, 7ರಂದು ಬೆಳಗ್ಗೆ ಧ್ವಜಾರೋಹಣ, ರಾತ್ರಿ ಭೇರಿತಾಡನ, ಯಾಗಶಾಲಾ ಪ್ರವೇಶ. 8ರಂದು ಬೆಳಗ್ಗೆ ಉತ್ಸವ, ರಾತ್ರಿ ಹಂಸವಾಹನೋತ್ಸವ, 9ರಂದು ಬೆಳಗ್ಗೆ ಉತ್ಸವ, ರಾತ್ರಿ ಶೇಷವಾಹನ. 10ರಂದು ಬೆಳಗ್ಗೆ ಉತ್ಸವ, ರಾತ್ರಿ ಶ್ರೀಸೌಮ್ಯ ಲಕ್ಷ್ಮೀ ಕಲ್ಯಾಣ, 11ರಂದು ಬೆಳಗ್ಗೆ ಉತ್ಸವ, ರಾತ್ರಿ ಪ್ರಹ್ಲಾದ ಪರಿಪಾಲನಾ ನಂತರ ಗರುಡೋತ್ಸವ, 12ರಂದು ಬೆಳಗ್ಗೆ ಹವನ, ಬಲಿ ಪ್ರದಾನ, ರಾತ್ರಿ ವಸಂತೋತ್ಸವ ಗಜೇಂದ್ರಮೋಕ್ಷ, 13ರಂದು ಬೆಳಗ್ಗೆ ರಥೋತ್ಸವ, ಸಂಜೆ ಧೂಳೀ ಉತ್ಸವ. 14ರಂದು ಬೆಳಗ್ಗೆ ಪೂಜೆ, ರಾತ್ರಿ ಮಂಟಪೋತ್ಸವ, ಡೋಲೋತ್ಸವ, ಶಯನೋತ್ಸವ, 15ರಂದು ಬೆಳಗ್ಗೆ ಅಶ್ವವಾಹನೋತ್ಸವ, ಲಕ್ಷ್ಮೀ ಪ್ರಣಯ ಕಲಹ ಸಂಧಾನ ಸೇವಾಪೂರ್ವಕ ಪಾವನ ಕಾವೇರಿಯಲ್ಲಿ ತೀರ್ಥ ಸ್ನಾನ, ರಾತ್ರಿ ಹನುಮಂತೋತ್ಸವ, ಪೂರ್ಣಾಹುತಿ. 16 ರಂದು ಬೆಳಗ್ಗೆ ಮಹಾಭಿಷೇಕ, ರಾತ್ರಿ ದ್ವಾದಶ ತಿರುವರಾಧನ, ದೇವತೋದ್ವಾಸನ ಉತ್ಸವ, ಧ್ವಜಾರೋಹಣ, ಚಕ್ರಾಬ್ಜ, ಮಂಡಲಾರಾಧನ, ಸೇತುಸೇವೆ ಅಪರಾಧ ಕ್ಷಮಾಪಣಾ. ಫೆ.17ರಂದು ರಾತ್ರಿ 7.30ಕ್ಕೆ ವೈಮಾಳಿಗೆ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.