ಜಿಲ್ಲೆ

13ರಂದು ಕಣ್ಣಂಗಾಲ ಗ್ರಾಮದಲ್ಲಿ ಕೆಸರುಗದ್ದೆ ಕ್ರೀಡಾಕೂಟ

ಬಾಲಮುರಳಿಕೃಷ್ಣ

ವಿರಾಜಪೇಟೆ: ಒಕ್ಕಲಿಗರ ಯುವ ವೇದಿಕೆ (ರಿ) ದಕ್ಷಿಣ ಕೊಡಗು ಮತ್ತು ಕಣ್ಣಂಗಾಲ ಗ್ರಾಮದ ಒಕ್ಕಲಿಗರ ಸಹಯೋಗದೊಂದಿಗೆ ಕೆಂಪೇಗೌಡ ಜಯಂತಿ ಪ್ರಯುಕ್ತ ಒಕ್ಕಲಿಗ ಸಮುದಾಯದವರಿಗೆ ಕೆಸರುಗದ್ದೆ ಕ್ರೀಡಾಕೂಟ ಜು.13 ರಂದು ಕಣ್ಣಂಗಾಲ ಗ್ರಾಮದಲ್ಲಿ ಏರ್ಪಡಿಸಲಾಗಿದೆ.

ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿ.ಪಿ. ಡಾಲೂ, ಉಪಾಧ್ಯಕ್ಷ ಬಿ.ಎಲ್. ಆನಂದ್, ಕಾಫಿ ಬೆಳೆಗಾರ ವಿ.ಕೆ.ನಾಗರಾಜ್, ವಿ.ಸಿ.ತಮ್ಮಯ್ಯ, ಕಣ್ಣಂಗಾಲ ಗ್ರಾ.ಪಂ. ಪಿಡಿಒ ಗುರುಶ್ರೀ, ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿ ಸದಸ್ಯ ಕೆ.ಎಸ್.ಗೋಪಾಲಕೃಷ್ಣ ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭ ಅದೇ ದಿನ ಸಂಜೆ 5 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಮಂಡ್ಯ ಲೋಕಾಯುಕ್ತ ಉಪ ಅಧೀಕ್ಷಕ ಎಚ್.ಪಿ. ಸುನಿಲ್ ಕುಮಾರ್, ಟಾಟಾ ಕಾಫಿ ತೋಟ ಹಿರಿಯ ವ್ಯವಸ್ಥಾಪಕ ವಿನಯ್, ಕಣ್ಣಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿ.ಆರ್.ಗ್ರೀಷ್ಮಾ ರಂಜು, ಪತ್ರಕರ್ತೆ ಉಷಾ ಪ್ರೀತಂ ಹಾಗೂ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ.