ಮೈಸೂರು: ನೇಗಿಲಯೋಗಿ ಮರುಳೇಶ್ವರ ಒಕ್ಕಲಿಗ ವಧು-ವರರ ವೇದಿಕೆಯಿಂದ ಆ.13ರಂದು ಒಕ್ಕಲಿಗ ವಧು-ವರರ ಸಮಾವೇಶ ಆಯೋಜಿಸಲಾಗಿದೆ.
ಜಯನಗರದ ಹೊಸ ನ್ಯಾಯಾಲಯದ ಮುಂಭಾಗ ಇರುವ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ಅಂದು ಬೆಳಗ್ಗೆ 9ರಿಂದ ಸಮಾವೇಶ ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದು. ಮಾಹಿತಿಗೆ 9483453005 ಸಂಪರ್ಕಿಸುವಂತೆ ವೇದಿಕೆ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು ಹೇಳಿಕೆಯಲ್ಲಿ ಕೋರಿದ್ದಾರೆ.