ಹುಬ್ಬಳ್ಳಿ: ವಿಶ್ವ ಆಸ್ಟಿಯೊಪೊರೋಸಿಸ್ ದಿನದ ಅಂಗವಾಗಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ, ಬ್ಯಾಂಕರ್ಸ್ ಕ್ಲಬ್ ಹುಬ್ಬಳ್ಳಿ ಮತ್ತು ಡಾ. ಗುಮಾಸ್ತೆ ಸಹಯೋಗದಲ್ಲಿ ನಗರದ ಶಿರೂರ ಪಾರ್ಕ್‌ನ ಬ್ಯಾಂಕರ್ಸ್ ಭವನದಲ್ಲಿ ಭಾನುವಾರ ಉಚಿತ ಆರ್ಥೋಪೆಡಿಕ್ ಮತ್ತು ಕಣ್ಣು ತಪಾಸಣೆ ಶಿಬಿರ ನಡೆಯಿತು.
ಎಲುಬು ಮತ್ತು ಕೀಲು ತಜ್ಞ ಡಾ. ಅಭಿಷೇಕ ಗುಮಾಸ್ತೆ ಮತ್ತು ಕಣ್ಣಿನ ತಜ್ಞೆ ಡಾ. ಲಕ್ಷ್ಮೀ ಬಿ.ಆರ್. ಗುಮಾಸ್ತೆ ನೇತೃತ್ವದಲಿ ತಪಾಸಣೆ ನಡೆಯಿತು.
75 ಜನರು ಬಿ.ಎಂ.ಡಿ. ಟೆಸ್ಟಿಂಗ್ ಮೆಷಿನ್ (ಡೆಕ್ಸಾ ಸ್ಕ್ಯಾನರ್)ನಿಂದ ಪರೀಕ್ಷೆ ಮತ್ತು 63 ಜನರು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ರೋಟರಿ ಕ್ಲಬ್ ಅಧ್ಯಕ್ಷ ಬಾಪುಗೌಡ ಬಿರಾದಾರ, ಕಾರ್ಯದರ್ಶಿ ಎ.ವಿ. ಸಂಕನೂರ, ಬ್ಯಾಂಕರ್ಸ್ ಕ್ಲಬ್ ಅಧ್ಯಕ್ಷ ಡಿ.ಜಿ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಪಾರ್ವತಿಕರ, ರೋಟರಿ ಕ್ಲಬ್ ಸದಸ್ಯರಾದ ಮಂಜುನಾಥ ಹೊಂಬಳ, ಈಶ್ವರ ಗುಳಗಣ್ಣವರ, ಉಮೇಶ ಗಡಾದ, ವೀರಣ್ಣ ಸುರಕೊಡ ಇತರರು ಉಪಸ್ಥಿತರಿದ್ದರು. ಕಲ್ಪನಾ ಕಾವಳೆಕರ ನಿರೂಪಿಸಿ ವಂದಿಸಿದರು.