ಖಾಸಬಾಗ-ವಡಗಾವಿ ವಲಯದ ದುರ್ಗಾದೇವಿ ಸಭಾಭವನದಲ್ಲಿ ಏರ್ಪಡಿಸಿದ್ದ 101 ಜೋಡಿ ದಂಪತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಒಕ್ಕೂಟಗಳ ಪದಗ್ರಹಣ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಂಸದೆ ಮಂಗಲ ಅಂಗಡಿ ಉದ್ಘಾಟಿಸಿದರು. ಅಡವಿಸಿದ್ಧೇಶ್ವರ ಸ್ವಾಮೀಜಿ, ಶಾಸಕ ಅಭಯ ಪಾಟೀಲ, ಯೋಜನಾಧಿಕಾರಿ ಮಂಜುನಾಥ ಎನ್.ಆರ್., ನಗರಸೇವಕಿ ಪ್ರಿಯಾ ಸಾತಗೌಡ ಇತರರಿದ್ದರು. 
ಜಿಲ್ಲೆ

ಭಾರತದ ಪರಂಪರೆಯಲ್ಲಿ ಸತ್ಯಕ್ಕಿದೆ ಪ್ರಾಧಾನ್ಯತೆ

Belagavi

ಹಿರೇಬಾಗೇವಾಡಿ, ಬೆಳಗಾವಿ: ಭಾರತದ ಭವ್ಯ ಪರಂಪರೆಯಲ್ಲಿ ಸತ್ಯ, ನಿಷ್ಠೆ, ಪ್ರಾಮಾಣಿಕತೆಗೆ ಪ್ರಾಧಾನ್ಯತೆ ಇದ್ದು, ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಡವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಖಾಸಬಾಗ-ವಡಗಾವಿ ವಲಯದ ದುರ್ಗಾದೇವಿ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ 101 ಜೋಡಿ ದಂಪತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಒಕ್ಕೂಟಗಳ ಪದಗ್ರಹಣ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಂಸದೆ ಮಂಗಲ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಸರ್ಕಾರ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾಡುತ್ತಿದ್ದು, ಅವರ ಜನಕಲ್ಯಾಣ ಕಾರ್ಯ ಪರಿಗಣಿಸಿ ಸರ್ಕಾರ ಅವರಿಗೆ ರಾಜ್ಯಸಭಾ ಸ್ಥಾನ ನೀಡಿದೆ ಎಂದರು.
ಶಾಸಕ ಅಭಯ ಪಾಟೀಲ, ಯೋಜನಾಧಿಕಾರಿ ಮಂಜುನಾಥ ಎನ್.ಆರ್. ಮಾತನಾಡಿದರು. ನಗರಸೇವಕಿ ಪ್ರಿಯಾ ಸಾತಗೌಡ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರು, ಸದಸ್ಯರು ಇದ್ದರು.

ಮೇಲ್ವಿಚಾರಕ ಉಮೇಶ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಮಂಜುನಾಥ ನಿರೂಪಿಸಿದರು. ಸಮನ್ವಯಾಧಿಕಾರಿ ಗಂಗೂಬಾಯಿ ಜಗತಾಪ ವಂದಿಸಿದರು.