ಜಿಲ್ಲೆ

ಬಿ.ದುರ್ಗದಲ್ಲಿ 128.2 ಮಿ.ಮೀ ಮಳೆ,76 ಮನೆಗಳಿಗೆ ಭಾಗಶಃ ಹಾನಿ

Chitradurga

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಬಿ.ದುರ್ಗದಲ್ಲಿ 128.2 ಮಿ.ಮೀ ಮಳೆಯಾಗಿದ್ದು,ಇದು ಜಿಲ್ಲೆಯಲ್ಲಿ ಸೋಮವಾರ ಸುರಿದ ಅತ್ಯಧಿಕ ಮಳೆ ಯಾಗಿದೆ.

ಹೊಳಲ್ಕೆರೆ 65.8,ರಾಮಗಿರಿ 24.2,ಚಿಕ್ಕಜಾಜೂರು 50.2,ಎಚ್.ಡಿ.ಪುರ 63,ತಾಳ್ಯ 9.2. ಹೊಸದುರ್ಗ 26.8,ಬಾಗೂರು 31.1, ಮತ್ತೋಡು 15.4,ಮಾಡದಕೆರೆ 37.2,ಶ್ರೀರಾಂಪುರ 40.2. ಹಿರಿಯೂರು 61.6,ಬಬ್ಬೂರು 61.4,ಈಶ್ವರಗೆರೆ 42,ಸೂಗೂರು 13.2, ಇಕ್ಕನೂರಿನಲ್ಲಿ 28.6.

ಚಿತ್ರದುರ್ಗ ಒಂದರಲ್ಲಿ 105.2,ಎರಡರಲ್ಲಿ 65.7,ಹಿರೇಗುಂಟನೂರು 11.5,ಐನಳ್ಳಿ 60.4,ಭರಮಸಾಗರ 27.4,ಸಿರಿಗೆರೆ 60.2, ತುರುವನೂರು 25.6. ಚಳ್ಳಕೆರೆ 36.8,ಪರಶುರಾಂಪುರ 54.2,ನಾಯಕನಹಟ್ಟಿ 65.2,ಡಿ.ಮರಿಕುಂಟೆ 43.3,ತಳುಕು 42.2. ಮೊಳ ಕಾಲ್ಮೂರು 46,ರಾಯಾಪುರ 34.6,ಬಿ.ಜಿ.ಕೆರೆ 36.8,ರಾಂಪುರ 20.2ಹಾಗೂ ದೇವಸಮುದ್ರ 23.2 ಮಿ.ಮೀ ಮಳೆಯಾಗಿದೆ

76 ಮನೆಗಳಿಗೆ ಭಾಗಶಃ ಹಾನಿ

ಜಿಲ್ಲಾದ್ಯಂತ 76 ಮನೆಗಳು ಭಾಗಶಃ ಹಾನಿಯಾಗಿದ್ದು,ಎರಡು ಮನೆಗಳಿಗೆ ತೀವ್ರ ಹಾನಿಗೆ ಒಳಗಾಗಿವೆ. ಚಿತ್ರದುರ್ಗ ತಾಲೂಕಿನಲ್ಲಿ 24 ಮನೆಗಳು,ಹಿರಿಯೂರು 17,ಚಳ್ಳಕೆರೆ 6,ಹೊಸದುರ್ಗ 5,ಹೊಳಲ್ಕೆರೆ 19ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 5 ಮನೆಗಳು ಭಾ ಗಶಃ ಹಾನಿಗೆ ಒಳಗಾಗಿವೆ. 45 ಹೆಕ್ಟೇರ್ ಕೃಷಿಹಾಗೂ 18 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿವೆ ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ. ಸಿಂಗಾಪುರದಲ್ಲಿ ಮನೆಯೊಂದರ ಕಾಂಪೌಂಡು ಕುಸಿದು ಅಲ್ಲಿದ್ದ ತೆಂಗಿನಕಾಯಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸಿಂಗಾಪುರದ ಹಳ್ಳದ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡ್ಡಿಯಾಗಿತ್ತು.