ಜಿಲ್ಲೆ

13 ಮೇಕೆಗಳು ಅನುಮಾನಸ್ಪದವಾಗಿ ಮೃತ

Mysuru - Desk - Naveen Kumar H P


ಗಂಡಸಿ : ಗಂಡಸಿ ಹೋಬಳಿಯ ಮುದುಡಿ ಬಿ.ತಾಂಡ್ಯ ಗ್ರಾಮದಲ್ಲಿ ಶನಿವಾರ 13 ಮೇಕೆ ಮರಿಗಳು ಅನುಮಾನಸ್ಪದವಾಗಿ ಮೃತಪಟ್ಟಿವೆ.
ಶಶಿಕಲಾ ಬಾಯಿ ಮತ್ತು ಸ್ವಾಮಿ ನಾಯಕ ದಂಪತಿ ಶನಿವಾರ ಬೆಳಗ್ಗೆ 35 ಮೇಕೆಗಳನ್ನು ಮೇಯಿಸಲು ಕಾಡಿಗೆ ಹೊಡೆದುಕೊಂಡು ಹೋಗಿದ್ದರು. ಆದರೆ ಸಂಜೆ ಮನೆಗೆ ಬರುವ ಸಮಯದಲ್ಲಿ 13 ಮೇಕೆಗಳು ದಾರಿಯ ಮಧ್ಯದಲ್ಲೇ ಸಾವನ್ನಪ್ಪಿವೆ.


ಸ್ಥಳಕ್ಕೆ ಪಶು ವೈದ್ಯ ಕಿಶೋರ್ ಭೇಟಿ ನೀಡಿ, ಉಳಿದ ಮೇಕೆಗಳಿಗೆ ಚಿಕಿತ್ಸೆ ನೀಡಿದ್ದು, 13 ಮೇಕೆಗಳನ್ನು ಮರಣೋತ್ತರ ಪರೀಕ್ಷೆ ಮಾಡಿದ್ದು, ಹಾಸನದ ಪಶು ವೈದ್ಯಕೀಯ ಕಾಲೇಜಿಗೆ ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದೆ. ವರದಿ ಬಂದ ಮೇಲೆ ಮೇಕೆಗಳ ಸಾವಿನ ಬಗ್ಗೆ ನಿಕರವಾಗಿ ತಿಳಿಯಲಿದೆ ಎಂದು ಮಾಹಿತಿ ನೀಡಿದರು.