filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 512;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42; 
ಜಿಲ್ಲೆ

13.53 ಲಕ್ಷ ಮೆ.ಟನ್ ಕಬ್ಬು ನುರಿಕೆ

ರಾಘವೇಂದ್ರಗೌಡ ಭೀ ಪಾಟೀಲ್

ಕಾಗವಾಡ: ಮಹಾರಾಷ್ಟ್ರದ ಹುಪರಿಯಲ್ಲಿರುವ ಕಲ್ಲಪ್ಪಣ್ಣ ಅವಾಡೆ ಜವಾಹರ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆ ಲಿ. 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ದಾಖಲೆಯ 13.53 ಲಕ್ಷ ಮೆ.ಟನ್ ಕಬ್ಬು ನುರಿಸಿ, ರೈತರಿಗೆ ಈಗಾಗಲೇ 3,150 ರೂ. ನಂತೆ ಬಿಲ್ ಪಾವತಿಸಲಾಗಿದೆ ಎಂದು ಮುಖಂಡ ಅಶೋಕ ಕಾತ್ರಾಳೆ ತಿಳಿಸಿದರು.

ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಕಾರ್ಖಾನೆಯ ಅಕಿವಾಟ ವೃತ್ತ ವ್ಯಾಪ್ತಿಯ ಶಿರಗುಪ್ಪಿ, ಯಡೂರ, ಚಂದೂರ, ಮಾಂಜರಿ, ಜುಗೂಳ, ಮಂಗಾವತಿ, ಶಹಾಪುರ, ಇಂಗಳಿ ಮತ್ತು ಮೊಳವಾಡ ಗ್ರಾಮದ ರೈತ ಸದಸ್ಯರಿಗೆ ಹಾಗೂ ಕಬ್ಬು ಪೂರೈಕೆದಾರರಿಗೆ

ಶುಕ್ರವಾರ ಸಕ್ಕರೆ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು. ಪ್ರತಿ ಟನ್ ಕಬ್ಬಿಗೆ 500 ಗ್ರಾಂ. ನಂತೆ ಸಕ್ಕರೆ ವಿತರಿಸಲಿದ್ದು, ಈಗ ಸಕ್ಕರೆ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ರೈತರು ಕಾರ್ಖಾನೆಗೆ ಭೇಟಿ ನೀಡಿ ಸಕ್ಕರೆ ಕಾರ್ಡ್ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಖಾನೆಯ ನಿರ್ದೇಶಕ ಸಂಜಯಕುಮಾರ ಕೋಥಳಿ, ಮುಖಂಡರಾದ ಅಭಯಕುಮಾರ ಅಕಿವಾಟೆ, ಅಪ್ಪಾಸಾಹೇಬ ಪಾಟೀಲ, ತಾತ್ಯಾಸಾಹೇಬ ಚೌಗುಲೆ, ಪಾರೀಸಾ ಪೊದಾಲೆ, ಭರತ ಲಾಂಡಗೆ, ಕಾರ್ಖಾನೆಯ ಅಕಿವಾಟ ವೃತ್ತದ ಅಗ್ರಿ ಓರಕರ್ ಅಸ್ಲಂ ತಾಂಬೋಳೆ, ಸಿಬ್ಬಂದಿ ಭರತ ಮದಭಾವೆ, ಕಿರಣ ಮಗ್ಗೆನ್ನವರ, ಸಂದೀಪ ಕೋಥಳಿ, ಸುರಜ ನರವಾಡೆ, ಸುನೀಲ ದಿವಟೆ ಇತರರು ಇದ್ದರು.