ಚಿತ್ರದುರ್ಗ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ‌್ಯಕರ್ತೆಯರು ಬೆಂಗಳೂರಲ್ಲಿ ನಡೆಸಿದ್ದ ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆ ತೀ ರ್ಮಾನದಂತೆ ಆದೇಶಿಸಬೇಕೆಂದು ರಾಜ್ಯಸರ್ಕಾರವನ್ನು ಒತ್ತಾಯಿಸಿ ಆ.12ರಿಂದ 3 ದಿನಗಳ ಕಾಲ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅ ಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರಾಜ್ಯಸಂಯುಕ್ತ ಆಶಾ ಕಾರ‌್ಯಕರ್ತೆಯರ ಸಂಘದ ಕಾರ‌್ಯದರ್ಶಿ ಡಿ.ನಾಗಲಕ್ಷ್ಮೀ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸಂಘದ ನೇತೃತ್ವದಲ್ಲಿ ಕಳೆದ ಜನವರಿ 7ರಿಂದ 10ರವರೆಗೆ ಬೆಂಗಳೂರಲ್ಲಿ 15 ಸಾವಿರ ರೂ.ನಿಶ್ಚಿತ ಗೌರವಧನ ಸಹಿತ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಲಾಗಿತ್ತು. ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಿಎಂ ಸಂಘದ ಪದಾಧಿಕಾರಿಗಳು,ಅಧಿಕಾರಿಗಳೊಂದಿಗೆ ನಡೆಸಿದ್ದ ಸಭೆಯಲ್ಲಿ ಏಪ್ರಿಲ್ 2025ರಿಂದ ಮಾಸಿಕ ಎಲ್ಲ ಆಶಾ ಕಾರ‌್ಯಕರ್ತೆಯರಿಗೆ ಪ್ರೋತ್ಸಾಹಧನ ಸ ಹಿತ ಕನಿಷ್ಠ 10 ಸಾವಿರ ರೂ.ಗೌರವಧನ,ಅಂಗನವಾಡಿ,ಬಿಸಿಯೂಟ ಕಾರ‌್ಯಕರ್ತೆಯರಿಗೆ ಕೊಟ್ಟಿರುವಂತೆ 1000 ರೂ.ಹೆಚ್ಚಳ ಇತ್ಯಾದಿ ಬೇಡಿಕೆ ಗಳನ್ನು ಈಡೇರಿಸುವುದಾಗಿ ಸಿಎಂ ಘೋಷಿಸಿದ್ದರು.
ಆದರೆ ಈವರೆಗೂ ರಾಜ್ಯಸರ್ಕಾರ ಅಂದು ಕೊಟ್ಟಿದ್ದ ಮಾತನ್ನು ಈಡೇರಿಸಿಲ್ಲ. ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಕನಿಷ್ಠ 10 ಸಾವಿರ ರೂ.ಗಳನ್ನು ಕಳೆದ ಏಪ್ರಿಲ್‌ನಿಂದ ಅನ್ವಯವಾಗುವಂತೆ ಆದೇಶಿಸಬೇಕು. 1 ಸಾವಿರ ರೂ.ಪ್ರೋತ್ಸಾಹಧನ ಹೆಚ್ಚಿಸಬೇಕು.ನಿವೃತ್ತ ಆಶಾಗಳಿಗೆ ಪಶ್ಚಿಮಬಂಗಾಳ ಮಾದರಿ ಇಡಗಂಟು ನೀಡಬೇಕು. ಕೇಂದ್ರದ ಪ್ರೋತ್ಸಾಹ ಧನ ಹೆಚ್ಚಳವನ್ನು ರಾಜ್ಯದಲ್ಲೂ ಜಾರಿಗೊಳಿಸು ವುದು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಲಾಗುತ್ತಿದೆ ಎಂದರು. ರವಿಕುಮಾರ್,ಗಿರಿಜಮ್ಮ, ನಾಗವೇಣಿ,ಲಕ್ಷ್ಮೀ, ರೇಣುಕಮ್ಮ, ಆಶಾ,ಮೀನಾಕ್ಷಮ್ಮ,ಕುಮುದಾ,ಸುಜಾತಾ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.