filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 239.81085; hist255: 0.0; hist252~255: 0.0; hist0~15: 0.0; 
ಜಿಲ್ಲೆ

12ರಿಂದ ಚಿತ್ರದುರ್ಗದಲ್ಲಿ ಸ್ವದೇಶಿ ಮೇಳ

ಚಿತ್ರದುರ್ಗ: ನಗರದಲ್ಲಿ ಇದೇ ಮೊದಲ ಬಾರಿಗೆ ಸ್ವದೇಶಿ ಮೇಳ ಆಯೋಜಿಸಲಾಗಿದೆ ಎಂದು ಮೇಳದ ಸಂಘಟಕ ಜಗದೀಶ್ ಹೇಳಿದರು.ನಗರ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ದೇಸಿ ಸಂಸ್ಕೃತಿ,ಆಟ,ಆಹಾರ, ಕ್ರೀಡೆ,ಸಾವಯವ ಕೃಷಿ, ಆಯುರ್ವೇದ ಚಿಕಿತ್ಸೆ ಹಾ ಗೂ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಗಳನ್ನೊಳಗೊಂಡ ಸ್ವಾವಲಂಬನೆ ಪರಿಕಲ್ಪನೆಯಡಿ ಸ್ವದೇಶಿ ಜಾಗರಣ ಮಂಚ್‌ನಿಂದ ಈ ಮೇಳವನ್ನು ನವೆಂಬರ್ 12ರಿಂದ 16ರವರೆಗೆ ನಗರದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ದೇಶದ ವಿವಿಧೆ ಡೆಯಿಂದ ಸ್ವದೇಶಿ ಉತ್ಪನ್ನಗಳ ತಯಾರಿಸುವಂಥ ಕರಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯ ಗೆ ತರಬೇತಿ,ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಕ್ರೀಡಾಂಗಣದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಮಕ್ಕಳು, ಮಹಿಳೆಯ ರು,ವಿದ್ಯಾರ್ಥಿಗಳು,ಯುವಜನರು, ರೈತರು,ಯುವ ಉದ್ಯಮಿಗಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ನಿತ್ಯ ಸಂಜೆ ರಾಷ್ಟ್ರ,ರಾಜ್ಯಮಟ್ಟದ ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ,ನಾಟಕ, ಯಕ್ಷಗಾನ, ತೊಗಲು ಗೊಂಬೆಯಾಟ ಏರ್ಪಡಿಸಲಾ ಗಿ ದೆ.ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ಆಯುರ್ವೇದ,ಪ್ರಕೃತಿ ಚಿಕಿತ್ಸೆ ಮಾಹಿತಿ ನೀಡಲಾಗುತ್ತಿದೆ. ದೇಸಿ ವಸ್ತುಗಳ ತಯಾ ರಿ ಹಾಗೂ ಪ್ರದರ್ಶನ,ನಾನಾ ಸ್ವದೇಶಿ ಗೋತಳಿ ಪ್ರದರ್ಶನ,ದೇಸಿ ಆಹಾರಗಳ ತಯಾರಿಕೆ ಮತ್ತು ಮಾರಾಟವೂ ಇರಲಿದೆ ಎಂದರು.

ಮೇಳದ ಸಂಯೋಜಕ,ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ,12ರಂದು ಚಾಲನೆ ಸಿಗಲಿರುವ ಮೇಳವು ಪ್ಲಾಸ್ಟಿಕ್ ಮುಕ್ತವಾಗಿರುತ್ತದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ದೇಸಿ ಕ್ರೀಡಾ ಸ್ಪರ್ಧೆಗಳಿರುತ್ತವೆ. ಸಂಜೆ ಜಾನಪದ ಕಲಾವೈಭವದಲ್ಲಿ ಅಜಿತ್‌ಬಸಾ ಪುರ ಹಾಗೂ ತಂಡದಿಂದ ಜನಪದ ಗೀತಾಗಾಯನವಿದೆ. 13ರಂದು ಮಹಿಳಾ ಸಮಾವೇಶ,ಸಂಜೆ ’ಶ್ವೇತಕುಮಾರ ಚರಿತ್ರೆ’ಯಕ್ಷಗಾನ ಪ್ರಸಂಗ ನಡೆಯಲಿದೆ. 14ರಂದು ಆಯುರ್ವೇದ ಶಿಬಿರ,ಮಧ್ಯಾಹ್ನ ಯುವ ಸಮಾವೇಶ ಏರ್ಪಡಿಸಲಾಗಿದೆ. ಸಂಜೆ ಪಂ.ಪ್ರಕಾಶ್ ಹೆಗಡೆ ಕಲ್ಲಾರೆ ಮನೆ,ಪಂ.ವಿಜಯ್‌ಗೋನಾಳ್,ಪಂ.ಮಹೇಶ್‌ರಾಜ್ ಸಾಲೊಂಕೆ ಅವರಿಂದ ಕೊಳಲು- ಸಿತಾರ್ ಜುಗಲ್‌ಬಂದಿ ಕಾರ‌್ಯಕ್ರಮ

15ರಂದು ತಾರಸಿ ತೋಟ ತರಬೇತಿ,ರೈತರೊಂದಿಗೆ ಸಂವಾದ,ಸಾವಯವ ಕೃಷಿ,ಬಹುಬೆಳೆ ಪದ್ಧತಿ, ಮಾರುಕಟ್ಟೆ,ಸಹಕಾರ ವ್ಯವಸ್ಥೆ ಕುರಿತು ಚರ್ಚೆ ನಡೆಯಲಿದೆ. ಸಂಜೆ’ಲಯ ಲಾವಣ್ಯ’ಕಾರ‌್ಯಕ್ರಮ. ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರ ತಾಳವಾದ್ಯ ಕಚೇರಿ ಇರುತ್ತದೆ. 16ರಂದು ಬೆಳಗ್ಗೆ ರಂಗೋಲಿ ಸ್ಪರ್ಧೆ,ಮಧ್ಯಾಹ್ನ ಪಂಚಗವ್ಯ ಚಿಕಿತ್ಸಾ ಶಿಬಿರ ನಡೆಯಲಿದೆ. ಸಂಜೆ ಶ್ರೀಕೃಷ್ಣ ಪಾರಿಜಾತ ಗೊಂಬೆಯಾಟ ನಡೆಯಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ,ಮೇಳದ ಸಹ ಸಂಯೋಜಕ ಡಾ.ಸಿದ್ದಾರ್ಥಗುಂಡಾರ್ಫಿ,ರವೀಂದ್ರ,ಸೌಭಾಗ್ಯಬಸವರಾಜ ನ್,ಹನುಮಂತೇಗೌಡ,ಡಿ.ಎಸ್.ಪ್ರದೀಪ್,ಸುರೇಶ್‌ಸಿದ್ದಾಪುರ,ಸಂಪತ್‌ಕುಮಾರ್,ನವೀನ್‌ಚಾಲುಕ್ಯ,ವೆಂಕಟೇಶ್‌ಯಾದವ್,ದಗ್ಗೆಶಿವ ಪ್ರಕಾಶ್,ಬಾಳೆಕಾಯಿ ರಾಮದಾಸ್ ಇದ್ದರು.