ಜಿಲ್ಲೆ

12ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ

ಮೈಸೂರು: ಕೆ.ಎನ್.ಪುಟ್ಟಬುದ್ದಿ ಫೌಂಡೇಷನ್‌ನಿಂದ ನಂಜನಗೂಡು ತಾಲೂಕಿನ ಕೋಣನೂರಿನಲ್ಲಿ ಫೆ.12ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ವರುಣ ಕ್ಷೇತ್ರದ ಬಿಜೆಪಿ ಮುಖಂಡ ಶರತ್ ಪುಟ್ಟಬುದ್ದಿ ತಿಳಿಸಿದರು.
ವರುಣ ಕ್ಷೇತ್ರ ವ್ಯಾಪ್ತಿಯ ಕೋಣನೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಬಿರದ ಮಾಹಿತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಪ್ರಸ್ತುತ ಆರೋಗ್ಯ ಎಂಬುದು ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿದೆ. ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಪ್ರಸ್ತುತ ಸನ್ನಿವೇಶಕ್ಕೆ ಅನ್ವಯ. ಹೀಗಾಗಿ ಕ್ಷೇತ್ರದ ಜನರ ಆರೋಗ್ಯ ದೃಷ್ಟಿಯಿಂದ ಶಿಬಿರ ಆಯೋಜಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಸಾಮಾನ್ಯ ಕಾಯಿಲೆಗಳನ್ನು ತಪಾಸಣೆ ಮಾಡಲಾಗುವುದು. ನುರಿತ ವೈದ್ಯರು ಆಗಮಿಸುವುದರಿಂದ ಸಾರ್ವಜನಿಕರು ನಿಗದಿತ ಸಮಯಕ್ಕೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು. ಅಲ್ಲದೆ ಅಗತ್ಯವಿರುವ ಔಷಧವನ್ನು ಸ್ಥಳದಲ್ಲೇ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಜನರಿಗೆ ಕರಪತ್ರಗಳನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಂಚಿದರು. ಕೋಣನೂರು ಗ್ರಾಪಂ ಸದಸ್ಯರಾದ ಮಹದೇವಸ್ವಾಮಿ, ರವಿ, ಮಹೇಶ್, ಮಹದೇವಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಬಸವಣ್ಣ, ಮುಖಂಡರಾದ ಮಾದಪ್ಪ, ಕೀಳನಪುರ ಪ್ರಕಾಶ್ ಇತರರು ಇದ್ದರು.