ಚಿತ್ರದುರ್ಗ:ಜಿಲ್ಲಾಡಳಿತ,ಜಿಪಂ,ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಸಮಾರಂಭವನ್ನು ಮಾ.12ರಂದು ಬೆಳಗ್ಗೆ 11 ಗಂಟೆಗೆ ಡಿಸಿ ಕಚೇರಿಯಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸುವರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಶಾಸಕರು,ವಿಧಾನ ಪರಿಷತ್ ಸದಸ್ಯರು,ನಿಗಮ,ಮಂಡಳಿ,ಪ್ರಾಧಿಕಾರ,ನಗರಸಭೆ ಅಧ್ಯಕ್ಷರು,ಆಯೋಗದ ಅಧ್ಯಕ್ಷರು,ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ,ಜಿಲ್ಲಾ ಅಖಿಲ ಭಾರತ ವೀರ ಶೈವ ಮಹಾಸಭಾ ಅಧ್ಯಕ್ಷ ಶಿವಮೂರ್ತಿಮಹಡಿ,ಪ್ರಧಾನ ಕಾರ‌್ಯದರ್ಶಿ ಎಂ.ಶಶಿಧರ ಬಾಬು, ಜಿಲ್ಲಾ ಜಂಗಮ ಸಮಾಜ ಅಧ್ಯಕ್ಷ ಎಂ.ಟಿ. ಮಲ್ಲಿ ಕಾರ್ಜುನ ಸ್ವಾಮಿ,ಪ್ರಧಾನ ಕಾರ‌್ಯದರ್ಶಿ ಎಸ್.ಷಡಾಕ್ಷರಯ್ಯ ಭಾಗವಹಿಸುವರು. ಹರಿಹರ ಗಿರಿಯಮ್ಮ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ.ಗುರುಬಸವ ಹಿರೇಮಠ್ ಉಪನ್ಯಾಸ ನೀಡುವರು. ಕೆಪಿಎಂ ಗಣೇಶಯ್ಯ ತಂಡ ಗೀತಗಾನಯನ ನಡೆಸಿಕೊಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ತಿಳಿಸಿದ್ದಾರೆ.