ಎಚ್.ಡಿ. ಕೋಟೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಹೆಳವರ ಹುಂಡಿ ಸಿದ್ದಪ್ಪ ಉದ್ಘಾಟಿಸಿದರು. ಡಾ.ಅಂಕನಹಳ್ಳಿ ಕುಮಾರ್, ಡಾ.ಕೆ.ಪಿ.ಪ್ರಸನ್ನ, ಕನ್ನಡ ಪ್ರಮೋದ್, ಪಿ.ಕೆ.ಶಿವರಾಜು ಇದ್ದರು.  
ಜಿಲ್ಲೆ

12ನೇ ಶತಮಾನದ ಶರಣರಿಂದ ಸಾಹಿತ್ಯ ಕೊಡುಗೆ

ಎಚ್.ಡಿ.ಕೋಟೆ: ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ 12ನೇ ಶತಮಾನದ ಶರಣರು ಸಾಹಿತ್ಯ ನೀಡಿದರು ಎಂದು ಶರಣ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್ ತಿಳಿಸಿದರು.

ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ತ್ರೀಯರಿಗೆ ಸಮಾನತೆ ದೊರಕಲು 12 ನೇ ಶತಮಾನದವರೆಗೆ ಕಾಯಬೇಕಾಯಿತು. 12ನೇ ಶತಮಾನವನ್ನು ಸೂರ್ಯ-ಚಂದ್ರರಿರುವವರೆಗೂ ನೆನಪು ಮಾಡಿಕೊಳ್ಳುವಂತೆ ಮಾಡಿದವರು ಶರಣರು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಳವರ ಹುಂಡಿ ಸಿದ್ದಪ್ಪ, ರನ್ನ, ಪೊನ್ನ, ಜನ್ನ ಸೇರಿದಂತೆ ಅನೇಕ ಆದಿ ಕವಿಗಳು ರಾಜರನ್ನು ಓಲೈಸುವ ಸಾಹಿತ್ಯ ರಚಿಸುತ್ತಿದ್ದರು. ಆದರೆ ಆ ಸಾಹಿತ್ಯಗಳು ಜನಸಾಮಾನ್ಯರನ್ನು ತಲುಪಲು ವಿಫಲವಾದವು. ಜನರಿಗೆ ಸಾಹಿತ್ಯ ತಲುಪಿದ್ದು 12ನೇ ಶತಮಾನದ ಶರಣರಿಂದ ಎಂದು ತಿಳಿಸಿದರು.

ಸಾಹಿತಿ ಡಾ.ಅಂಕನಹಳ್ಳಿ ಕುಮಾರ್ ಉಪನ್ಯಾಸ ನೀಡಿದರು. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಪಿ.ಪ್ರಸನ್ನ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪ್ರಮೋದ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಕೆ. ಶಿವರಾಜು ಇತರರು ಇದ್ದರು.