ಜಿಲ್ಲೆ

ರ‌್ಯಾಲಿಯಲ್ಲಿ 1,250 ಮಾಜಿ ಸೈನಿಕರು ಭಾಗಿ

ಬೆಳಗಾವಿ: ನಗರದ ಮರಾಠ ಲಘು ಪದಾತಿ ದಳ (ಎಂಎಲ್‌ಐಆರ್‌ಸಿ)ದಲ್ಲಿ ಮದ್ರಾಸ್ ರೆಜಿಮೆಂಟಲ್ ಸೆಂಟರ್ ವೆಲ್ಲಿಂಗ್ಟನ್ ವತಿಯಿಂದ ಶನಿವಾರ ಮಾಜಿ ಸೈನಿಕರ ಕುಂದು-ಕೊರತೆ ನಿವಾರಣಾ ರ‌್ಯಾಲಿ ಜರುಗಿತು.

ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಾದ ಬ್ಯಾಂಕಿಂಗ್, ಪಿಂಚಣಿ, ವಿಧವಾ ವೇತನ, ಆರೋಗ್ಯ ವಿಮೆ ಹಾಗೂ ವಿವಿಧ ಕಡತಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಯಿತು. ಮದ್ರಾಸ್ ರೆಜಿಮೆಂಟಲ್ ಸೆಂಟರ್ ವ್ಯಾಪ್ತಿಯಲ್ಲಿನ ವಿವಿಧ ಯೂನಿಟ್‌ಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಪಡೆದ ಹಾಗೂ ಅವರ ಕುಟುಂಬದವರು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಶಿಬಿರ ಮತ್ತು ವೀರನಾರಿಯರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಮದ್ರಾಸ್ ರೆಜಿಮೆಂಟಲ್ ಸೆಂಟರ್‌ವೆಲ್ಲಿಂಗ್ಟನ್ ಕಮಾಂಡೆಂಟ್ ಬ್ರಿಗೇಡಿಯರ್ ಕೃಷ್ಣಾಡು ದಾಸ ಮಾಜಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸಿದರು. ರ‌್ಯಾಲಿಯಲ್ಲಿ 1,250 ಮಾಜಿ ಸೈನಿಕರು ಪಾಲ್ಗೊಂಡಿದ್ದರು.