ನಿಪ್ಪಾಣಿಯ ಶ್ರೀ ಶ್ರದ್ಧಾ ಕ್ರೆಗ್ ಸೌಹಾರ್ದ ಸಹಕಾರಿ ಸಂಘದ 25ನೇ ವಾರ್ಷಿಕ ಸಭೆಯಲ್ಲಿ ಸಂಸ್ಥಾಪಕ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಮಾತನಾಡಿದರು.ಪಪ್ಪು ಪಾಟೀಲ, ಪ್ರಭುಲಿಂಗ ಸ್ವಾಮಿ, ಶಿವಮೂರ್ತಿ ಸ್ವಾಮಿ, ಶಶಿಕಾಂತ ಕೋಠಿವಾಲೆ, ಸುರೇಶ ಕೋಠಿವಾಲೆ ಮತ್ತಿತರರಿದ್ದರು. 
ಜಿಲ್ಲೆ

125 ಕೋಟಿ ರೂ.ಠೇವು ಸಂಗ್ರಹಿಸುವ ಗುರಿ

ನಿಪ್ಪಾಣಿ: ಸಹಕಾರಿಯು 100 ಕೋಟಿ ರೂ.ಠೇವು ಸಂಗ್ರಹ ಸನಿಹದಲ್ಲಿದ್ದು, ಶೀಘ್ರ 125 ಕೋಟಿ ರೂ.ಠೇವು ದಾಟಲು ಪ್ರಯತ್ನಿಸಲಿದ್ದೇವೆ. ಇದಕ್ಕೆ ಎಲ್ಲ ಸದಸ್ಯರ ಸಹಕಾರ ಅಗತ್ಯ ಎಂದು ಸ್ಥಳೀಯ ಶ್ರೀ ಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು. ಸ್ಥಳೀಯ ವಿಎಸ್‌ಎಂ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಹಕಾರಿಯ 25ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಈಚೆಗೆ ಕಾಗವಾಡದಲ್ಲಿ ಹೊಸ ಶಾಖೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಚಿಕ್ಕೋಡಿ ತಾಲೂಕಿನ ಖಡಕಲಾಟ, ಶಿರಗುಪ್ಪಿ ಸಹಿತ ಅಥಣಿ, ಹುಬ್ಬಳ್ಳಿ ಮತ್ತು ಗದಗನಲ್ಲಿ ಹೊಸ ಶಾಖೆ ಆರಂಭಿಸಲಿದ್ದೇವೆ. ಜ.1ರಿಂದ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿ ಗ್ರಾಹಕರಿಗೆ ಉನ್ನತ ಸೇವೆ ನೀಡಲಾಗುವುದು ಎಂದರು.2024ರ ಮಾರ್ಚ್‌ವರೆಗೆ ಸಹಕಾರಿಯು 66.02 ಕೋಟಿ ರೂ.ಠೇವು ಸಂಗ್ರಹಿಸಿ, 45.82 ಕೋಟಿ ರೂ.ಸಾಲ ವಿತರಿಸಿದೆ. 2023-24ನೇ ಆರ್ಥಿಕ ವರ್ಷದಲ್ಲಿ 1.11 ಕೋಟಿ ರೂ.ಲಾಭವಾಗಿದ್ದು, ಶೇ.15 ಲಾಭಾಂಶ ಸದಸ್ಯರಿಗೆ ವಿತರಿಸಲಿದ್ದೇವೆ. 6.49 ಕೋಟಿ ರೂ.ವಿವಿಧ ನಿಧಿ ಕಾಯ್ದಿರಿಸಲಾಗಿದೆ ಎಂದರು. ಸಂಚಾಲಕರಾದ ಸುರೇಶ ಕೋಠಿವಾಲೆ, ಶಶಿಕಾಂತ ಕೋಠಿವಾಲೆ, ಸಂಚಾಲಕ ಸಂಜಯ ಶಿಂತ್ರೆ, ಹಾರೂಗೇರಿ ಶಾಖೆ ವೈಸ್ ಚೇರ್ಮನ್ ಪ್ರಭುಲಿಂಗ ಪಾಲಬಾವಿ, ಚೇರ್ಮನ್ ಹಣಮಂತ ಯಲಶೆಟ್ಟಿ, ಅಭಿಷೇಕ ಪಾಟೀಲ, ಅಶೋಕ ಬುರ್ಗೆ ಮಾತನಾಡಿದರು. ಚಿಕ್ಕೋಡಿ ಶಾಖೆಯ ವ್ಯವಸ್ಥಾಪಕಿ ರೂಪಾಲಿ ಧಾರವಾಡ ಪ್ರಾರ್ಥನಾ ಗೀತೆ ಹಾಡಿದರು. ಅಗಲಿದ ಗಣ್ಯರು, ಸದಸ್ಯರು ಮತ್ತು ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎಲ್ಲ ಶಾಖೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ವೈಸ್ ಚೇರ್ಮನ್ ಶಿವಮೂರ್ತಿ ಸ್ವಾಮಿ, ಸಂಚಾಲಕ ರಾವಸಾಹೇಬ ಪಾಟೀಲ, ಧನಂಜಯ ಮಾನವಿ, ದಯಾನಂದ ಕೋಠಿವಾಲೆ, ನರಸಗೊಂಡಾ ಪಾಟೀಲ, ಶ್ರೀರಾಮ ಭಾರಮಲ, ರಾಜೇಶ ತಿಳವೆ, ಮುರಘೇಂದ್ರ ತೋಡಕರ, ರಾಮಗೊಂಡಾ ಪಾಟೀಲ, ಸಿಇಒ ದಿನಕರ ಪವಾರ, ಆನಂದ ಗಿಂಡೆ, ಜಗದೀಶ ಕುಲಕರ್ಣಿ, ಸಂಚಾಲಕ ಪಪ್ಪು ಪಾಟೀಲ, ಸಿದ್ಧಗೊಂಡ ಪಾಟೀಲ, ಸಂಚಾಲಕ ರಾಜಶೇಖರ ಹಿರೇಕೋಡಿ ಇತರರಿದ್ದರು.