ಜಿಲ್ಲೆ

1203 ಸ್ಥಾನಗಳಿಗೆ 3452 ಅಭ್ಯರ್ಥಿಗಳು

ಕಾರವಾರ: ಡಿಸೆಂಬರ್ 27 ರಂದು ಜಿಲ್ಲೆಯ 7 ತಾಲೂಕುಗಳ 126 ಗ್ರಾಪಂಗಳಿಗೆ ನಡೆಯಲಿರುವ ಚುನಾವಣೆಯ ಅಂತಿಮ ಕಣ ಚಿತ್ರಣ ಲಭ್ಯವಾಗಿದೆ. 1282 ಸ್ಥಾನಗಳ ಪೈಕಿ ಎರಡು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. 77 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, 1203 ಸ್ಥಾನಗಳಿಗೆ 3452 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪರಿಶಿಷ್ಟ ಜಾತಿಯ 366,ಪರಿಶಿಷ್ಟ ಪಂಗಡದ 234, ಹಿಂದುಳಿದ ಅ ವರ್ಗದ 610, ಹಿಂದುಳಿದ ಬ ವರ್ಗದ 133, ಹಾಗೂ ಸಾಮಾನ್ಯ ಕ್ಷೇತ್ರದಿಂದ 2109 ಅಭ್ಯರ್ಥಿಗಳಿದ್ದಾರೆ. ಒಟ್ಟಾರೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ 1453 ಮಹಿಳೆಯರಾಗಿದ್ದಾರೆ. ಎಲ್ಲ ಕಡೆ ಭಾರಿ ಸ್ಪರ್ಧೆ ಇದೆ. ಕೆಲವೆಡೆ ಐದಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿರಸಿಯ 1 ಹಾಗೂ ಜೊಯಿಡಾದ 1 ಕ್ಷೇತ್ರಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ಯಾವ ಗ್ರಾಪಂನಲ್ಲಿ ಅವಿರೋಧ?
ಶಿರಸಿಯ ಮೇಲಿನ ಓಣಿಕೇರಿ , ಭೈರುಂಬೆ, ಇಟಗುಳಿ,ಸದಾಶಿವಳ್ಳಿ,ಶಿವಳ್ಳಿ, ಜಾನ್ಮನೆ, ಕುಳವೆ, ಸುಗಾವಿ, ಗುಡ್ನಾಪುರಗಳಲ್ಲಿ ತಲಾ 1, ವಾನಳ್ಳಿ, ನೆಗ್ಗು, ಮಂಜಗುಣಿ, ಅಂಡಗಿ, ಬದನಗೋಡ, ಭಾಶಿ ಗ್ರಾಪಂಗಳಲ್ಲಿ ತಲಾ 2, ಹುತ್ತಗಾರ, ಹುಣಸೆಕೊಪ್ಪ, ಯಡಳ್ಳಿ, ಇಸಳೂರು ಗ್ರಾಪಂಗಳಲ್ಲಿ ತಲಾ 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಸಿದ್ದಾಪುರ ಹೆಗ್ಗರಣಿ, ಹಸರಗೋಡ, ತ್ಯಾಗ್ಲಿ, ಹಾರ್ಸಿಕಟ್ಟಾ, ಬಿದ್ರಕಾನ, ಕಾವಂಚೂರು, ಮನ್ಮನೆ, ಕೊರ್ಲಕೈ, ಬೇಡ್ಕಣಿ, ಇಟಗಿ, ದೊಡ್ಮನೆ ಗ್ರಾಪಂಗಳಲ್ಲಿ ತಲಾ 1, ತಂಡಾಗುಂಡಿ, ಅಣಲೇಬೈಲ್ ಗ್ರಾಪಂಗಳಲ್ಲಿ ತಲಾ 2 ಸ್ಥಾನಗಳಿಗೆ, ಯಲ್ಲಾಪುರದ ದೇಹಳ್ಳಿ, ಮಾವಿನಮನೆ, ನಂದೊಳ್ಳಿ, ಚಂದಗುಳಿ, ಹಾಸಣಗಿ ಗ್ರಾಪಂಗಳ ತಲಾ 1ಸ್ಥಾನಕ್ಕೆ, ಆನಗೋಡಿನ 2, ಇಡಗುಂದಿಯ 4 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.

ಮುಂಡಗೋಡಿನ ಓರಲಗಿಯ-1, ಮೈನಳ್ಳಿಯ-2, ಸಾಲಗಾಂವನ-3 ಸ್ಥಾನಗಳಿಗೆ, ಹಳಿಯಾಳ ತೇರಗಾಂವ, ಮದ್ನಳ್ಳಿ, ತತ್ವಣಗಿ, ಮುರ್ಕವಾಡ ಗ್ರಾಪಂಗಳ ತಲಾ 1, ಸಾಂಬ್ರಾಣಿಯ-2 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಜೊಯಿಡಾದಲ್ಲಿ ಅಖೇತಿ, ನಾಗೋಡಾ,ನಂದಿಗದ್ದೆ, ಅಣಶಿ, ಗಾಂಗೋಡಾ ಗ್ರಾಪಂಗಳಲ್ಲಿ ತಲಾ 1 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ದಾಂಡೇಲಿಯಲ್ಲಿ ಯಾವುದೇ ಸ್ಥಾನಕ್ಕೂ ಅವಿರೋಧ ಆಯ್ಕೆಯಾಗಿಲ್ಲ.
ತಾಲೂಕು ಗ್ರಾಪಂ ಒಟ್ಟು ಕ್ಷೇತ್ರ ಅವಿರೋಧ ಆಯ್ಕೆ ಚುನಾವಣೆ ನಡೆಯುವ ಸ್ಥಾನ ಅಭ್ಯರ್ಥಿಗಳು
ಶಿರಸಿ 32 323 33 289 857
ಸಿದ್ದಾಪುರ 23 221 15 206 620
ಯಲ್ಲಾಪುರ 15 158 12 146 414
ಮುಂಡಗೋಡ 16 194 06 188 527
ಹಳಿಯಾಳ 20 212 06 206 500
ದಾಂಡೇಲಿ 04 37 00 37 111
ಜೊಯಿಡಾ 16 137 05 137 423