ಚಿತ್ರದುರ್ಗ:ಆಟ್ಲಾಸ್ ಹೆಸರಿನ ಧೂಮಕೇತು ಅಕ್ಟೋಬರ್ 12ರಿಂದ 27ರವರೆಗೆ ಬರಿಗಣ್ಣಿಗೆ ಗೋಚರವಾಗಲಿದೆ. 2023ರ ಜನವರಿಯಲ್ಲಿ ಭೂ ಮಿ ಯಿಂದ 100 ಕೋಟಿ ಕಿ.ಮೀ ದೂರದಲ್ಲಿದ್ದ ಈ ಧೂಮಕೇತು ಸೂರ‌್ಯನನ್ನು ಒಂದು ಸುತ್ತು ಹಾಕಿ ಈಗ ಭೂಮಿ ಸಮೀಪ ಬರುತ್ತಿದೆ ಎಂದು ನಗರದ ಹವ್ಯಾಸಿ ಖಗೋಳ ವೀಕ್ಷಕ ಎಚ್‌ಎಸ್‌ಟಿ ಸ್ವಾಮಿ ತಿಳಿಸಿದ್ದಾರೆ.
ಭೂಮಿ ಕಕ್ಷೆಯಲ್ಲಿ 17ದಿನಗಳ ಕಾಲ ಇರಲಿದ್ದು,ಬಳಿಕ ಸ್ವಸ್ಥಾನಕ್ಕೆ ಹಿಂದಿರುಗಲಿದೆ. 12ರಂದು ಸಂಜೆ ವೇಳೆ ಪಶ್ಚಿಮದಲ್ಲಿ ಉರಗದರವೆಂಬ ನಕ್ಷತ್ರ ಪುಂಜದ ಬಳಿ ಈ ಧೂಮಕೇತು ಕಾಣಿಸಲಿದೆ. ಇದರಿಂದ ಭೂಮಿ,ಪಶು,ಪಕ್ಷಿಗಳಿಗೆ ಯಾವುದೇ ರೀತಿ ತೊಂದರೆಯಿಲ್ಲ.ಆತಂಕವೂ ಬೇಡ.ಅಪ ರೂಪಕ್ಕೆ ಕಾಣಿಸುವ ಈ ಧೂಮಕೇತುವನ್ನು ನೋಡುವ ಅವಕಾಶ ಕಳೆದುಕೊಳ್ಳದಂತೆ ನಾಗರಿಕರಿಗೆ ಸ್ವಾಮಿ ಮನವಿ ಮಾಡಿದ್ದಾರೆ. ಮಾಹಿತಿಗೆ-9448565534.